ಶುಕ್ರವಾರ, ಜನವರಿ 24, 2020
21 °C

ವಾಲಿಬಾಲ್: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ (ಬಳ್ಳಾರಿ): ಕರ್ನಾಟಕದ ಬಾಲಕಿಯರ ತಂಡ ತಂಡ ಶ್ರೀ ವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ವರ್ಷದೊಳಗಿನ ಶಾಲಾಮಕ್ಕಳ 57ನೇ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಬುಧವಾರ 25-18, 25-20 ರಿಂದ ಪಶ್ಚಿಮ ಬಂಗಾಳ ತಂಡವನ್ನು ಪರಾಭವಗೊಳಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು.ತೀವ್ರ ಕೂತೂಹಲ ಮೂಡಿಸಿದ್ದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕಿ ಪವಿತ್ರ, ನಿರ್ಮಲ, ವೀಣಾ, ಪ್ರತಿಭಾ, ವಾಣಿ ಉತ್ತಮ ಪ್ರದರ್ಶನ ತೋರುವ ಮೂಲಕ ಪಶ್ಚಿಮ ಬಂಗಾಳದ ಬಾಲಕಿಯರಿಗೆ ಚೇತರಿಸಿಕೊಳ್ಳಲು ಅವಕಾಶ ನೀಡದೆ ತಂಡದ ಗೆಲುವಿನಲ್ಲಿ ಮಹ್ವದ ಪಾತ್ರ ನಿರ್ವಹಿಸಿದರು.ಬಾಲಕರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡ 19-25, 17-25 ರಿಂದ ದೆಹಲಿ ತಂಡದ ಎದುರು ಪರಾಭವಗೊಂಡಿತು.  ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಉತ್ತರಾಖಂಡ 25-17, 25-12ರಿಂದ ರಾಜಸ್ತಾನ ತಂಡದ ಮೇಲೂ; ಮಣಿಪುರ ತಂಡ 25-17, 25-16ರಿಂದ ದೆಹಲಿ ತಂಡದ ವಿರುದ್ಧವೂ; ರಾಜಾಸ್ತಾನ 25-12, 25-09ರಿಂದ ವಿದ್ಯಾಭಾರತಿ ತಂಡದ ಮೇಲೂ ಜಯ ಪಡೆದವು.

ಪ್ರತಿಕ್ರಿಯಿಸಿ (+)