ಮಂಗಳವಾರ, ಮೇ 17, 2022
25 °C

ವಿಕಿಲೀಕ್ಸ್ ವೆಬ್‌ಸೈಟ್ ತಾತ್ಕಾಲಿಕ ಮೌನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ):  ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿ ಇಡೀ ಜಗತ್ತಿನಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ವಿಕಿಲೀಕ್ಸ್ ವೆಬ್‌ಸೈಟ್ ಇದೀಗ ತಾನು ತಾತ್ಕಾಲಿಕವಾಗಿ ಕಾರ್ಯಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.ತನ್ನ ಈ ಕ್ರಮಕ್ಕೆ ಆರ್ಥಿಕ ಕಂಪೆನಿಗಳನ್ನು ಹೊಣೆಯನ್ನಾಗಿಸಿರುವ ವಿಕಿಲೀಕ್ಸ್, `ವೀಸಾ, ಮಾಸ್ಟರ್‌ಕಾರ್ಡ್, ವೆಸ್ಟರ್ನ್ ಯೂನಿಯನ್  ಹಾಗೂ ಪೇಪಾಲ್‌ನಂಥ ಕಂಪೆನಿಗಳು ವಿಧಿಸಿರುವ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಡುವುದಾಗಿಯೂ ಅದು ಹೇಳಿಕೊಂಡಿದೆ.ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಡುವುದಾಗಿ ವಿಕಿಲೀಕ್ಸ್ ಸಂಸ್ಥಾಪಕ ಜುಲಿಯನ್ ಅಸಾಂಜ್  ಸೋಮವಾರ  ಹೇಳಿದ್ದಾರೆ. ಕಳೆದ ವರ್ಷ ಅಮೆರಿಕ ವಿದೇಶಾಂಗ ಇಲಾಖೆಯ ಸುಮಾರು  250,000 ದಾಖಲೆಗಳನ್ನು ಪ್ರಕಟಿಸುವ ಮೂಲಕ ವಿಕಿಲೀಕ್ಸ್ ಭಾರಿ ಸುದ್ದಿ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.