ಗುರುವಾರ , ಜೂನ್ 17, 2021
27 °C

ವಿಜಯಪುರ: ಪೊಲೀಸರಿಗೆ ವಸತಿ ಗೃಹ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಸ್ಥಳೀಯ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ವಸತಿಗೃಹಗಳು ಮಾತ್ರ ಹೆಚ್ಚುತ್ತಿಲ್ಲ. ಈಗಿರುವ ವಸತಿ ಗೃಹಗಳ ಮೇಲ್ಛಾವಣಿ ಉದುರುತ್ತಿದ್ದು, ಮಳೆಬಂದರೆ ಸೋರುತ್ತಿದೆ. ನೀರಿನ ತೊಂದರೆ ಇದೆ ಮತ್ತು ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ವಾಸಿಸಲು ಕಷ್ಟವಾಗಿದೆ ಎಂದು ಈ ವಸತಿ ಗೃಹಗಳ ನಿವಾಸಿಗಳು ದೂರಿದ್ದಾರೆ.ವಿಜಯಪುರ ಠಾಣೆಯು 1972ರಲ್ಲಿ ಪುರಸಭೆಯ 69,012 ಚದರ ಅಡಿ ಜಾಗದಲ್ಲಿ 7,850 ಚದರ ಅಡಿಯಷ್ಟು ಮಾತ್ರ ಉಪಯೋಗಿಸಿಕೊಂಡು ಠಾಣೆ ಮತ್ತು 13 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಸುತ್ತಲೂ ಸಂರಕ್ಷಣಾ ಗೋಡೆ ಹಾಕಲಾಗಿದೆ. ಇಲ್ಲಿನ ವೃತ್ತ ನಿರೀಕ್ಷಕರ ಕಚೇರಿಯೂ ಸಹ ಪುರಸಭೆಗೆ ಸೇರಿದ ಸ್ವತ್ತಿನಲ್ಲಿಯೇ ಇರುವುದರಿಂದ ಎರಡೂ ಕಚೇರಿಗಳು ಪುರಸಭೆಗೆ ಬಾಡಿಗೆ ಮತ್ತು ತೆರಿಗೆಯನ್ನು ಕಟ್ಟುತ್ತಿದ್ದಾರೆ.2008ರಲ್ಲಿ ಕರ್ನಾಟಕ ಪೊಲೀಸ್ ಗೃಹ ಮಂಡಳಿ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ವಸತಿ ಗೃಹ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಿಕೊಂಡು ಹೋದವರು ಇದುವರೆಗೆ ಮತ್ತೆ ಇತ್ತ ಗಮನ ಹರಿಸಿಲ್ಲ.

ಇಲ್ಲಿನ ಠಾಣೆಗೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗೆ ಮಂಜೂರಾದ ಒಟ್ಟು 52 ಸಿಬ್ಬಂದಿಗಳಲ್ಲಿ ಸುಮಾರು 40 ಸಿಬ್ಬಂದಿಗಳು ವಸತಿಗೃಹದ ಸೌಲಭ್ಯವಿಲ್ಲದೆ ಪಟ್ಟಣದ ಖಾಸಗಿ ಮನೆಗಳಲ್ಲಿ ಮತ್ತು ಸಮೀಪದ ಊರುಗಳಲ್ಲಿ ವಾಸ ಮಾಡುತ್ತಿದ್ದಾರೆ.ವಿಜಯಪುರ ಠಾಣಾ ವ್ಯಾಪ್ತಿಗೆ ಒಳಪಡುವ 2 ಹೋಬಳಿ ಮತ್ತು 53 ಹಳ್ಳಿಗಳಿಗೆ  80 ಸಾವಿರದಷ್ಟು ಜನಸಂಖ್ಯೆ ಇದ್ದು 42 ಪೊಲೀಸ್ ಸಿಬ್ಬಂದಿ ಮಾತ್ರವೇ ಇದ್ದಾರೆ.ವಿಜಯಪುರದ ಜನಸಂಖ್ಯೆಯೇ 45 ಸಾವಿರಕ್ಕೂ ಮೀರಿ ಬೆಳೆದಿದ್ದು, ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ. ವಿಜಯಪುರ ಬಸ್ ನಿಲ್ದಾಣದಲ್ಲಿ ಮಾತ್ರ ಒಬ್ಬ ಪೇದೆಯನ್ನು  ಟ್ರಾಫಿಕ್ ನಿರ್ವಹಿಸಲು ನಿಯೋಜಿಸಲಾಗಿದ್ದು, ಇಲ್ಲಿನ ಜನನಿಬಿಡ ಹಾಗೂ ವ್ಯಾಪಾರ ಕೇಂದ್ರವಾದ ಗಾಂಧಿ ಚೌಕ, ಶಿವಗಣೇಶ ಸರ್ಕಲ್, ಗೂಡು ಮಾರುಕಟ್ಟೆ ಮುಂತಾದ ಕಡೆ ಇನ್ನಷ್ಟು ಸಂಚಾರ ನಿಯಂತ್ರಣ ಪೊಲೀಸ್ ಸಿಬ್ಬಂದಿಯ ಅವಶ್ಯಕತೆ ಇದೆ.ತುರ್ತು ಸಂದರ್ಭಗಳಲ್ಲಿ ಇಲ್ಲಿನ ಪೊಲೀಸರನ್ನು ಕರೆಸಿಕೊಂಡಾಗ ಸಹಜವಾಗಿಯೇ ಇಲ್ಲಿ ಸಿಬ್ಬಂದಿಯ ಕೊರತೆ ಸರ್ವೇ ಸಾಮಾನ್ಯವಾಗಿದೆ.ಚನ್ನರಾಯಪಟ್ಟಣ ಠಾಣೆಯೂ ಸಮಸ್ಯೆಗಳ ಆಗರ:


ಜನವರಿ 24 ರಂದು ಮುಖ್ಯಮಂತ್ರಿಗಳ ಚಾಲನೆಯಿಂದ ಅಧಿಕೃತವಾಗಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯನ್ನು  ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರ ವ್ಯಾಪ್ತಿಗೆ 52 ಹಳ್ಳಿಗಳು ಒಳಪಟ್ಟಿವೆ. ಸಬ್ ಇನ್ಸ್‌ಪೆಕ್ಟರ್ ಸೇರಿ ಠಾಣೆಯಲ್ಲಿ 38 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಠಾಣೆಯಲ್ಲಿಯೂ ಸಹ ಸಿಬ್ಬಂದಿಗಳಿಗೆ  ವಸತಿ ಗೃಹವಿಲ್ಲ.ಚನ್ನರಾಯಪಟ್ಟಣದಲ್ಲಿ ವಾಸಿಸಲು ಬಾಡಿಗೆ ಮನೆಗಳೂ ದೊರಕದೆ ಸಮಸ್ಯೆ ಎದರುತಿಸುತ್ತಿದ್ದಾರೆ.

ಸಮೀಪದ ಊರುಗಳಲ್ಲಿ ಮನೆಯನ್ನು ಮಾಡಿಕೊಂಡರೂ ಚನ್ನರಾಯಪಟ್ಟಣಕ್ಕೆ ಬರಲು ಸರಿಯಾದ ಬಸ್ ಸೌಕರ್ಯವಿಲ್ಲ.ಊಟ ತಿಂಡಿಗಾಗಿ ಗ್ರಾಮದಲ್ಲಿ ಹೊಟೇಲ್‌ಗಳ ಸೂಕ್ತ ವ್ಯವಸ್ಥೆಯೂ ಇಲ್ಲ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಇದೆ.ಈ ಠಾಣಾ ವ್ಯಾಪ್ತಿಗೆ ಸೇರಿದ ಬೂದಿಗೆರೆ ಮುಖ್ಯ ರಸ್ತೆಯು ದೇವನಹಳ್ಳಿ ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗವಾಗಿರುವುದರಿಂದ ವಾಹನ ಸಂಚಾರ ಹೆಚ್ಚು.ಇಲ್ಲಿಯೂ ಸಹಾ ಪೊಲೀಸ್ ಹೊರ ಠಾಣೆ ಇಲ್ಲದಿರುವುದರಿಂದ ತೊಂದರೆಗಳನ್ನು ನಿಭಾಯಿಸಲು ಕಷ್ಟವಾಗಿದೆ. ುರ್ತು ಸ್ಥಿತಿಯಲ್ಲಿ ಚನ್ನರಾಯಪಟ್ಟಣದಿಂದ ಬೇರೆ ಜಾಗಗಳಿಗೆ ಶೀಘ್ರವಾಗಿ ತಲುಪಲು ಕಷ್ಟವಾಗುತ್ತದೆ. ಠಾಣೆಯು ಅದರ ವ್ಯಾಪ್ತಿಯ ಕೇಂದ್ರಸ್ಥಾನದಲ್ಲಿ ಇಲ್ಲದಿರುವುದರಿಂದ ದೂರು ದಾಖಲು ಮಾಡಲು ಬರುವವರ ಸಂಖ್ಯೆಯೂ ಕಡಿಮೆ.ಈ ಠಾಣೆಗೆ ಮಂಜೂರಾದಂತಹ ಮಹಿಳಾ ಮುಖ್ಯಪೇದೆಯೊಬ್ಬರು ಇಲ್ಲಿರುವ ಅನಾನುಕೂಲಗಳಿಂದಾಗಿ ಸ್ವಯಂ ನಿವೃತ್ತಿ ಪಡೆದಿರುವುದು ಗಮನಾರ್ಹ.

        -

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.