ವಿಜಯ್ ಕುಮಾರ್‌ಗೆ ಭವ್ಯ ಸ್ವಾಗತ

ಶನಿವಾರ, ಮೇ 25, 2019
22 °C

ವಿಜಯ್ ಕುಮಾರ್‌ಗೆ ಭವ್ಯ ಸ್ವಾಗತ

Published:
Updated:

ಮೊವ್, ಮಧ್ಯಪ್ರದೇಶ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದ ವಿಜಯ್ ಕುಮಾರ್‌ಗೆ ಸೋಮವಾರ ಇಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು.ಇಲ್ಲಿಗೆ ಸಮೀಪದ ಇಂದೋರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇವರಿಗೆ ಸಾವಿರಾರು ಮಂದಿ ಸೈನಿಕರು ಮತ್ತು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹರ್ಷೋದ್ಘಾರ ಮಾಡಿ ಸ್ವಾಗತಿಸಿದರು. ಸಿಖ್ ರೆಜಿಮೆಂಟ್‌ನ ವಾದ್ಯಗಾರರು ಸುಶ್ರಾವ್ಯ ವಾದ್ಯ ನುಡಿಸಿದರು.ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ವಿಮಾನ ನಿಲ್ದಾಣದಲ್ಲಿಯೇ ವಿಜಯ್ ಕುಮಾರ್ ಅವರನ್ನು ಸ್ವಾಗತಿಸಿ, ಅಭಿನಂದಿಸಿದರು.ನಂತರ ವಿಜಯ್‌ಕುಮಾರ್ ಕುಳಿತಿದ್ದ ವಾಹನವನ್ನು ಸೇನೆಯ ನೂರಾರು ವಾಹನಗಳು ಹಿಂಬಾಲಿಸಿದವು.ಇದೇ ವೇಳೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಜಯ್ ಕುಮಾರ್ `ನಾನು ಇಂತಹ ಸ್ವಾಗತ ಸಿಗುತ್ತದೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನ ಬದುಕಿನ ಮರೆಯಲಾಗದ ಕ್ಷಣ ಇದು~ ಎಂದು ಭಾವೋದ್ರಿಕ್ತರಾಗಿ ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry