ಸೋಮವಾರ, ಮೇ 17, 2021
28 °C

ವಿಜಾಪುರಕ್ಕೆ ವಿಶೇಷ ಸ್ಥಾನಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರದ ಯುಪಿಎ ಸರ್ಕಾರ ಹೈದ್ರಾಬಾದ ಕರ್ನಾಟಕದ 6 ಜಿಲ್ಲೆಗಳಿಗೆ ಸಂವಿಧಾನದ 371ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ. 1948ರ ಹೈದ್ರಾಬಾದ್ ವಿಮೋಚನೆಯ ನಂತರ ತೆಲಂಗಾಣ ಹಾಗೂ ವಿದರ್ಭ ಜೊತೆಗೆ ನೀಡಬೇಕಿತ್ತು. ತಡವಾಗಿಯಾದರೂ ಈ ಕುರಿತು ನಿರ್ಧರಿಸಿದ್ದು ಸಂತಸದ ವಿಚಾರ.ವಿಜಾಪುರವು ಸಹ ಮುಂಬೈ ಕರ್ನಾಟಕದ ಅತ್ಯಂತ ಹಿಂದುಳಿದ ಮತ್ತು ಬರದ ಜಿಲ್ಲೆ. ಈ ಜಿಲ್ಲೆ ಹಾಗೂ ಜಿಲ್ಲೆಗೆ ಅಂಟಿಕೊಂಡಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೂ ಪ್ರಾಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಗುಲಬರ್ಗಾ ವಿಭಾಗಕ್ಕೆ ಈಗಾಗಲೇ ಜಿಲ್ಲೆಯ ನ್ಯಾಯಾಂಗ ಹಾಗೂ ಸಾರಿಗೆ ಇಲಾಖೆಯನ್ನು ಸೇರಿಸಲಾಗಿದೆ. ವಿಜಾಪುರ ಜಿಲ್ಲೆಯಲ್ಲಿಯೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ವರ್ಗಗಳ ಸಂಖ್ಯೆವು ಗಣನೀಯ ಪ್ರಮಾಣದಲ್ಲಿದೆ. ಗುಲಬರ್ಗಾ ನಂತರ ಲಂಬಾಣಿ ತಾಂಡಾಗಳ ಸಂಖ್ಯೆ ಹೆಚ್ಚಿರುವುದು ವಿಜಾಪುರದಲ್ಲಿ.ಕಳೆದ ವರ್ಷ ರಾಜ್ಯ ಸರ್ಕಾರವೇ ಪ್ರಕಟಿಸಿದ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವಿಜಾಪುರ ಜಿಲ್ಲೆಯಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವಿನ ಶೈಕ್ಷಣಿಕ ಮಟ್ಟದ ವ್ಯತ್ಯಾಸ ಅತ್ಯಂತ ಕೆಳಮಟ್ಟದಲ್ಲಿದೆ.ವಿಶೇಷ ಸ್ಥಾನಮಾನವು ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಒದಗಿಸುವುದರಿಂದ ಈ ಜಿಲ್ಲೆಯ ಅಲ್ಪಸಂಖ್ಯಾತರು ಮತ್ತು ದಲಿತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಲು ಸಾಧ್ಯ. ರಾಜ್ಯ ಸರ್ಕಾರ ತಕ್ಷಣ ಅಂಕಿ ಸಂಖ್ಯೆಯ ದಾಖಲೆಗಳ ಸಮೇತ ಕೇಂದ್ರಕ್ಕೆ ಶಿಫಾರಸು ಮಾಡುವುದರ ಮೂಲಕ ಈ ಜಿಲ್ಲೆಗೂ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.