ಚಿಂಚಲಿ (ರಾಯಬಾಗ): ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಶಕ್ತಿ ದೇವತೆ ಮಾಯಕ್ಕಾ ದೇವಿಯ ಕಿಲಕಟ್ಟರ ಜಾತ್ರೆಯ ಎರಡನೇ ದಿನವಾದ ಗುರುವಾರ ದೇವಿಗೆ ಹೋಳಿಗೆ ನೈವೇದ್ಯ ಮತ್ತು ದೇವಿಯ ಪಾಲಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಮಹಿಳೆಯರು ಕಿಲಕಟ್ಟಿ ಆವರಣದಲ್ಲಿ ಹೋಳಿಗೆ ತಯಾರಿಸಲಾಯಿತು. ಹೋಳಿಗೆ ಮಾಡಲು ಬೇಕಾದ ಎಲ್ಲ ಸಾಮಗ್ರಿಗಳನ್ನು ದೇವಸ್ಥಾನ ಸಮಿತಿ ಪೂರೈಸಿತ್ತು. ಮಧ್ಯಾಹ್ನ ದೇವಿಯ ಪಾಲಕಿ ಉತ್ಸವದ ನಂತರ ದೇವಿಗೆ ಹೋಳಿಗೆ ನೈವೇದ್ಯ ಅರ್ಪಿಸಲಾಯಿತು.

ಶುಕ್ರವಾರ ನಡೆಯುವ ಅನ್ನ ಪ್ರಸಾದಕ್ಕಾಗಿ ದೇವಸ್ಥಾನ ಸಮಿತಿ 8 ಟನ್ ಗೋಧಿ, 15 ಟನ್ ಅಕ್ಕಿ, 4.5 ಕ್ವಿಂಟಾಲ್ ಬೆಲ್ಲ, 4 ಕ್ವಿಂಟಾಲ್ ಸಕ್ಕರೆ, 10 ಕ್ವಿಂಟಾಲ್ ಬೇಳೆ, 20 ಡಬ್ಬಿ ತುಪ್ಪ, 30 ಡಬ್ಬಿ ಎಣ್ಣೆ ಹಾಗೂ ಹುಗ್ಗಿ ಮಾಡಲು ಮಸಾಲೆ ಸಾಮಗ್ರಿಗಳಿಗಾಗಿ ಒಂದು ಲಕ್ಷದ ಗೋಡಂಬಿ, ಒಣ ದ್ರಾಕ್ಷಿ ಇನ್ನಿತರೆ ಸಾಮಗ್ರಿಗಳನ್ನು ಖರೀದಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ನ ನಿರ್ದೇಶಕ ಮಹೇಶ ಕೊಂಬೆನ್ನವರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಕಿಲಕಟ್ಟಿಯನ್ನು ಮತ್ತೆ ಸಕಲ ವಿಧಿವಿಧಾನದೊಂದಿಗೆ ಬಾಯಿ ಮುಚ್ಚಲಾಗುವುದು. ಭಾನುವಾರದ ವರೆಗೆ ಕಿಲಕಟ್ಟಿ ಆವರಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.