ಬುಧವಾರ, ಮೇ 18, 2022
23 °C

ವಿದೇಶಿ ಗೋಲ್‌ಕೀಪರ್ ಕೋಚ್‌ನತ್ತ ಎಚ್‌ಐ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಷ್ಯಾ ಕಪ್ ಹಾಗೂ ಜೂನಿಯರ್ ವಿಶ್ವಕಪ್ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಹಾಕಿ ಇಂಡಿಯಾ (ಎಚ್‌ಐ), ಭಾರತ ಪುರುಷರ ಹಾಕಿ ತಂಡಕ್ಕೆ ವಿದೇಶಿ ಗೋಲ್‌ಕೀಪರ್ ಕೋಚ್ ಒಬ್ಬರನ್ನು ನೇಮಿಸಲು ಸಿದ್ಧತೆ ನಡೆಸಿದೆ.ಮಲೇಷ್ಯಾದಲ್ಲಿ ಆಗಸ್ಟ್ 24 ರಿಂದ ಸೆಪ್ಟಂಬರ್ 1ರವರೆಗೆ ಏಷ್ಯಾ ಕಪ್ ಟೂರ್ನಿ  ಹಾಗೂ ಇದೇ ವರ್ಷ ಡಿಸೆಂಬರ್ 6 ರಿಂದ 15ರ ವರೆಗೆ ಜೂನಿಯರ್ ವಿಶ್ವಕಪ್ ನಡೆಯಲಿದೆ. ವಿದೇಶಿ ಗೋಲ್‌ಕೀಪರ್ ಕೋಚ್ ಒಬ್ಬರ ಹುಡುಕಾಟದಲ್ಲಿರುವ ವಿಷಯವನ್ನು ಹಾಕಿ ಇಂಡಿಯಾದ ಕಾರ್ಯದರ್ಶಿ ನರೀಂದರ್ ಬಾತ್ರಾ ಖಚಿತ ಪಡಿಸಿದ್ದಾರೆ.`ಭಾರತ ಪುರುಷರ ತಂಡದೊಂದಿಗೆ ಕಾರ್ಯನಿರ್ವಹಿಸುವಂತಹ ವಿದೇಶಿ ಗೋಲ್‌ಕೀಪರ್ ಕೋಚ್‌ಗಾಗಿ ತಪಾಸಣೆ ನಡೆಸುತ್ತಿದ್ದೇವೆ. ಈಗಾಗಲೇ ಮೂವರ ಹೆಸರು ಅಂತಿಮಗೊಳಿಸಿದ್ದೇವೆ. ಅದರಲ್ಲಿ ಯಾರು ಯೋಗ್ಯ ಎನಿಸುತ್ತಾರೋ, ಯಾರ ಷರತ್ತುಗಳು ನಮಗೆ ಒಪ್ಪಿಗೆಯಾಗುತ್ತವೆಯೋ ಅಂತಹವರನ್ನು 2-3 ದಿನಗಳಲ್ಲಿ ನೇಮಿಸಲಿದ್ದೇವೆ. ಅದಕ್ಕೆ ಭಾರತ ಕ್ರೀಡಾ ಪ್ರಾಧಿಕಾರದ ಅನುಮತಿ ಬೇಕು' ಎಂದು ಬಾತ್ರಾ ತಿಳಿಸಿದ್ದಾರೆ.ಇತರ ವಿದೇಶಿ ಕೋಚ್‌ಗಳಂತಲ್ಲದೇ ಗೋಲ್‌ಕೀಪರ್ ಕೋಚ್ ಅವರನ್ನು ಅಲ್ಪಾವಧಿಗಾಗಿ ನೇಮಿಸಿಕೊಳ್ಳಲು ಚಿಂತನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.