ಸೋಮವಾರ, ಏಪ್ರಿಲ್ 12, 2021
25 °C

ವಿದೇಶಿ ಪ್ರಭಾವದಿಂದ ನಕಾರಾತ್ಮಕತೆ: ಕಂಬಾರ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇತರೆ ವಿಶ್ವವಿದ್ಯಾಲಯಗಳು ಕಲಿಸದ ಶಿಸ್ತು, ಸಂಯಮ ಮತ್ತು ತಾಳ್ಮೆಯನ್ನು ಬಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಕಲಿಸುತ್ತಿದೆ. ವಿಶ್ವವಿದ್ಯಾಲಯವೆಂಬ ಕಲ್ಪನೆಯೇ ವಿದೇಶದ್ದಾದರೂ ಇಲ್ಲಿ ನೆಲೆಗೊಂಡಿರುವ ಅಧ್ಯಾತ್ಮಕ್ಕೆ ದೇಸಿಯ ಗುಣವಿದೆ~ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ಪ್ರಸ್ತುತ ರಾಜ್ಯದಲ್ಲಿ ಇರುವ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬಿತ್ತುವ  ಕಾರ್ಯವನ್ನು ನಡೆಸುತ್ತಿಲ್ಲ ಎಂಬುದೇ ದುರಂತದ ಸಂಗತಿ. ಬದುಕಿನ ಒಳನೋಟಗಳನ್ನು ಗ್ರಹಿಸಲು ಸಾಧ್ಯವಾಗದೇ ಇರುವ ಬೋಧನೆ, ಪಾಠ ಪ್ರವಚನಗಳ ಅಗತ್ಯವಿದೆಯೇ?~ ಎಂದು ಪ್ರಶ್ನಿಸಿದರು.`ವಿದೇಶಿಯರ ಪ್ರಭಾವ ಹೇಗಿದೆಯೆಂದರೆ ಈ ನೆಲದ ಪ್ರತಿ ಕಣವನ್ನು ನಕಾರತ್ಮಕ ದೃಷ್ಟಿಕೋನದಿಂದಲೇ ತರ್ಕಿಸಲು ಆರಂಭಿಸುತ್ತೇವೆ. ಎಲ್ಲ ಕಲ್ಪನೆಗಳನ್ನು ಮೂಢನಂಬಿಕೆಗಳ ಮಾಪನದಲ್ಲಿ ಅಳೆದು ತೂಗುತ್ತೇವೆ. ಆದರೆ ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಹಲವು ಭಿನ್ನತೆ ಮತ್ತು ಮೌಢ್ಯವೆನಿಸುವ ನಂಬಿಕೆಗಳು ಒಳಗೊಂಡಿದೆ ಎಂಬುದನ್ನು ಮರೆಯಬಾರದು~ ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, `ವಿದ್ಯಾ ಗುರುಗಳಾದ ಕಂಬಾರ ಅವರೊಂದಿಗೆ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಅತೀವ ಸಂತಸ ತಂದಿದೆ~ ಎಂದು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ರಾಜಯೋಗಿನಿಯರಾದ ಬಿ.ಕೆ.ವೀಣಾ, ಬಿ.ಕೆ.ಸರಳಾ ದಾದೀಜಿ, ` ಸಂಗೀತಗಂಗಾ~ ಸಂಸ್ಥೆಯ ಸಂಚಾಲಕಿ ಹೇಮಾಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.