ಮಂಗಳವಾರ, ಮೇ 18, 2021
28 °C

ವಿದ್ಯಾನಿಕೇತನ ಶಾಲೆಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾನಿಕೇತನ ಶಾಲೆಗೆ ಪ್ರಶಸ್ತಿ

ಬೆಂಗಳೂರು:  ವಿದ್ಯಾನಿಕೇತನ ಸ್ಕೂಲ್ ಹಾಗೂ ಬಿಷಪ್ ಕಾಟನ್ಸ್ ಸ್ಕೂಲ್ ತಂಡಗಳು ರಾಜ್ಯ ಶಾಲಾ ಬಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯಗಳಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಜಯ ಗಳಿಸಿ ಚಾಂಪಿಯನ್ ಎನಿಸಿದವು.ಕಂಠೀರವ ಹೊರಾಂಗಣ ಕ್ರೀಡಾಂಗಣದ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಗಗನ್ (17 ಪಾಯಿಂಟ್) ತೋರಿದ ಅದ್ಭುತ ಪ್ರದರ್ಶನದ ಬಲದಿಂದ ವಿದ್ಯಾನಿಕೇತನ ಸ್ಕೂಲ್ 37-21 ಪಾಯಿಂಟ್‌ಗಳಿಂದ ಬಿಷಪ್ ಕಾಟನ್ ಹೈಸ್ಕೂಲ್ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಎತ್ತಿಹಿಡಿಯಿತು.ಪಂದ್ಯದ ಮೊದಲಾರ್ಧದ ಮುಗಿದಾಗ 18-7ರಲ್ಲಿ ಮುನ್ನಡೆ ಸಾಧಿಸಿದ್ದ ವಿದ್ಯಾನಿಕೇತನ ಸ್ಕೂಲ್, ಉತ್ತರಾರ್ಧದಲ್ಲೂ ಪ್ರಾಬಲ್ಯ ಮೆರೆದು ಪಂದ್ಯವನ್ನು ತನ್ನದಾಗಿಸಿಕೊಂಡಿತು.ಬಾಲಕಿರ ವಿಭಾಗ: ಈ ವಿಭಾಗದಲ್ಲಿ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ 33-17 ಪಾಯಿಂಟ್‌ಗಳಿಂದ ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ವಿರುದ್ಧ ಗೆದ್ದಿತು. ಮರಿಯಮ್ (11) ಹಾಗೂ ಲೋಪಮುದ್ರಾ (11) ವಿಜಯಿ ತಂಡದ ಗೆಲುವಿನ ರೂವಾರಿ ಎನಿಸಿದರು.ಮೂರನೇ ಸ್ಥಾನಕ್ಕಾಗಿ ಬಾಲಕರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಪಬ್ಲಿಕ್ ಸ್ಕೂಲ್ ಸೌಥ್ 32-24 ಪಾಯಿಂಟ್‌ಗಳಲ್ಲಿ ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ವಿರುದ್ಧ ಜಯ ಸಾಧಿಸಿತು. ಬಾಲಕಿಯರ ವಿಭಾಗದ ಪಂದ್ಯದಲ್ಲಿ ಕುಮಾರನ್ಸ್ ಚಿಲ್ಡ್ರನ್ಸ್ ಹೋಮ್ ತಂಡ 27-17 ಪಾಯಿಂಟ್‌ಗಳಿಂದ ಕೇಂದ್ರಿಯ ವಿದ್ಯಾಲಯ ಎದುರು ಗೆಲುವು ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.