ಶುಕ್ರವಾರ, ಜೂಲೈ 10, 2020
22 °C

ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ

ಶೃಂಗೇರಿ: ಇಲ್ಲಿನ ಪಟ್ಟಣ ಪಂಚಾಯಿತಿ ಸಮುದಾಯ ಭವನದಲ್ಲಿ ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ ಸೋಮವಾರ ನಡೆಯಿತು.

ಅಧ್ಯಕ್ಷರಾಗಿ ಮಾನಗಾರು ಎಚ್.ಬಿ. ನಟರಾಜ್, ಉಪಾಧ್ಯಕ್ಷರಾಗಿ ಬಿ.ಕೆ. ಶ್ರೀನಿವಾಸ್, ರಾಜಲಕ್ಷ್ಮೀ ಕಾರ್ಯದರ್ಶಿಯಾಗಿ ಸಂಕ್ಲಾಪುರ ಮಂಜುನಾಥ್ ಮತ್ತು ಎಚ್.ಎಸ್. ಕೃಷ್ಣಮೂರ್ತಿ ಆಯ್ಕೆಯಾದರು.

ಸದಸ್ಯರುಗಳಾಗಿ ಟಿ.ಎಸ್. ಗೋಪಾಲ, ಶೈಲೆಂದ್ರ, ನಾಗರಾಜಭಟ್, ರಾಜೇಶ್ ದುರ್ಗಾದೇವಸ್ಥಾನ ಆಯ್ಕೆಗೊಂಡರು.

ಸಭೆಯಲ್ಲಿ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತೀ ವೆಂಕಟೇಶ್ ಮಾತನಾಡಿದರು.

ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಂ.ಎಸ್. ರಂಗನಾಥ್, ಪಕ್ಷದ ಬಲವರ್ಧನೆಗಾಗಿ ಕಾರ್ಯಕರ್ತರು ಸ್ಪಂದಿಸಬೇಕು. ಚುನಾವಣೆ ಕಾಲಕ್ಕೆ ಮಾತ್ರ ಜನರ ಬಳಿಗೆ ಹೋಗದೇ ಎಲ್ಲಾ ಸಂದರ್ಭದಲ್ಲೂ ಕ್ರಿಯಾಶೀಲರಾಗಿ ಜನರೊಂದಿಗೆ ಸ್ಪಂದಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಶಿವಶಂಕರ್, ಅಧ್ಯಕ್ಷ ಎ.ಎಸ್. ನಯನ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಮಂಜೇಶ್, ಚೇತನ್‌ಹೆಗ್ಡೆ, ಕೆ.ಆರ್. ನಾಗೇಂದ್ರ ಇತರರು ಇದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಆರ್. ದೇವೇಂದ್ರ ಹೆಗ್ಡೆ ಅವರ ನಿಧನಕ್ಕೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.