ಗೋಣಿಕೊಪ್ಪಲು: ಇಲ್ಲಿನ ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿಗಳು ಈಚೆಗೆ ಕುಂದ ದೇವರಕಾಡಿಗೆ ಭೇಟಿ ನೀಡಿ ವನ್ಯಸಂಕುಲ ನೋಡಿ ವಿಸ್ಮಯಗೊಂಡರು.

ಶಾಲೆಯ ‘ಟೈಗರ್ ಪಗ್’ ಪರಿಸರ ಸಂಘದ ವಿದ್ಯಾರ್ಥಿಗಳು ದೇವರಕಾಡಿನಲ್ಲಿ ಮಲಬಾರ್ಗ್ರೇ ಹಾರ್ನ್ಬಿಲ್, ವೈಟ್ ಬ್ರಸ್ಟೆಡ್, ಕಿಂಗ್ಫಿಷರ್, ರೆಡ್ವಿಸ್ಕರ್ಡ್ಬುಲ್ಬುಲ್, ರೆಡ್ ವೆಂಟೆಡ್ ಬುಲ್ಬುಲ್, ಪರ್ಪಲ್ ರೂಪೆಡ್ ಸನ್ಬರ್ಡ್, ಡ್ರೋಂಗೋ ಕುಕೊ ಇತರೆ 30 ಪ್ರಭೇದ ಪಕ್ಷಿಗಳನ್ನು ನೋಡಿ ಅಚ್ಚರಿಪಟ್ಟರು.

ಕೆಲವು ಪಕ್ಷಿಗಳು ಮರದ ಮೇಲೆ ಇದ್ದರೆ ಮತ್ತೆ ಕೆಲವು ನೆಲದ ಮೇಲೆ ಓಡಾಡಿಕೊಂಡು ಆಹಾರ ತಿನ್ನುತ್ತಿದ್ದವು. ಇನ್ನು ಕೆಲವು ಗದ್ದೆ ಬಯಲು, ಕಾಫಿ ತೋಟಗಳಲ್ಲಿ ಆಹಾರ ಅರಸುತ್ತಿದ್ದವು. ‘ಹುಲ್ಲಿನೊಳಗೆ ಕುಳಿತುಕೊಳ್ಳುವ ಪಕ್ಷಿಗಳು ಹುಲ್ಲಿನ ಬಣ್ಣದಲ್ಲಿಯೇ ಇದ್ದವು. ತಮ್ಮ ರಕ್ಷಣೆಗಾಗಿ ಪಕ್ಷಿಗಳು ಎಲ್ಲಿ ವಾಸಿಸುತ್ತವೆಯೋ ಆ ಪರಿಸರದ ಬಣ್ಣ ಹೊಂದಿರು ತ್ತವೆ’ ಎಂದು ಅಧ್ಯಾಪಕ ಕೃಷ್ಣ ಚೈತನ್ಯ ಹೇಳಿದರು.

ಪಕ್ಷಿಗಳನ್ನು ಗುರುತು ಹಚ್ಚುವ ವಿಧಾನ, ಅವುಗಳ ಆಹಾರ ಕ್ರಮ ಮುಂತಾದವುಗಳನ್ನು ಪ್ರಾಯೋಗಿಕವಾಗಿ ಅವುಗಳ ಮೂಲದಲ್ಲಿಯೇ ತೋರಿಸಿಕೊಡಲಾಯಿತು. ಅಪರೂಪದ ಲಾರ್ಕ್ ಡ್ರೋಂಗೊ ಕುಕೊ ಪಕ್ಷಿಗಳು, ಸ್ಕೀಮಿಟರ್ ಬ್ಯಾಬರ್ ಪಕ್ಷಿಗಳು, ಲೋಟೆನ್ಸ್ ಸನ್ಬರ್ಡ್, ಸ್ಪೈಡರ್ ಹಂಟರ್ ಪಕ್ಷಿಗಳು ವಿದ್ಯಾರ್ಥಿಗಳ ಮನಸೂರೆಗೊಂಡವು.

‘ಈ ಪಕ್ಷಿಗಳು ಪರಿಸರ ಸಮತೋಲನ ಕಾಪಾಡಿ ಅರಣ್ಯ ರಕ್ಷಿಸುತ್ತವೆ. ಕ್ರಿಮಿಕೀಟಗಳನ್ನು ನಾಶಪಡಿಸಿ ಪರಸರ ಸ್ವಚ್ಛಗೊಳಿಸುತ್ತವೆ. ಪಕ್ಷಿಗಳ ಮೂಲಕ ಬೀಜ ಪ್ರಸಾರವಾಗಿ ಅರಣ್ಯ ವೃದ್ಧಿಸುತ್ತದೆ. ಹೀಗಾಗಿ, ಪರಿಸರ ರಕ್ಷಣೆಯಲ್ಲಿ ಪಕ್ಷಿಗಳ ಪಾತ್ರ ಬಹು ಮುಖ್ಯ’ ಎಂದು ಕೃಷ್ಣಚೈತನ್ಯ ಹೇಳಿದರು.

ಬಳಿಕ, ಕುಂದ ಗ್ರಾಮದ ಈಶ್ವರ ದೇವರಕಾಡಿಗೆ ತೆರಳಿ ಅಲ್ಲಿ ಮುಗಿಲೆತ್ತರ ಬೆಳೆದ ಮರಗಳನ್ನು ವೀಕ್ಷಿಸಿದರು. ಬೃಹತ್ ಗಾತ್ರದ ದೂಪದ ಮರ, ಮಾವಿನಮರ, ಅವುಗಳಿಗೆ ಸುತ್ತಿಕೊಂಡಿರುವ ಬಳ್ಳಿ ಮೊದಲಾದವುಗಳ ಬಗ್ಗೆ ಮಾಹಿತಿ ಪಡೆದರು.

ನೂರಾರು ವರ್ಷಗಳಿಂದ ಮರದ ಬುಡದಂತೆ ಬೆಳೆದಿದ್ದ ಬಳ್ಳಿಗಳನ್ನು ನೋಡಿ ವಿದ್ಯಾರ್ಥಿಗಳು ಅಚ್ಚರಿಗೊಂಡರು. ಮರಗಳ ಮೇಲೆ ಬೆಳೆದಿದ್ದ ಅಪ್ಪು ಸಸ್ಯಗಳು, ಪರಾವಲಂಬಿ ಸಸ್ಯಗಳನ್ನು ನೋಡಿ ಅವುಗಳ ಗುಣಲಕ್ಷಣವನ್ನು ಕೃಷ್ಣ ಚೈತನ್ಯ ವಿವರಿಸಿದರು.

ಅಪರೂಪದ ಚಿಟ್ಟೆಗಳ ಬಗ್ಗೆ ಅವುಗಳ ಸ್ವಭಾವ, ಆಹಾರ ಪದ್ಧತಿ, ಹಾರಾಟ ಮೊದಲಾದ ವಿಷಯಗಳ ಬಗ್ಗೆ ಬೆಂಗಳೂರಿನ ಪರಿಸರ ತಜ್ಞ ಡೇನಿಯಲ್ ಸುಕುಮಾರ್ ಮಾಹಿತಿ ನೀಡಿದರು. ಎಲೆಗಳ ಮೇಲೆ ಕುಳಿತ್ತಿದ್ದ ಎಲೆ ಆಕಾರದ ಕೆಲವು ಚಿಟ್ಟೆಗಳನ್ನು ನೋಡಿ ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು.

ಗಿಡಮರಗಳು ಬೆಳೆಯುವ ವಿಧಾನ, ಚಿಟ್ಟೆಗಳು ವಾಸಿಸುವ...ಹೀಗೆ ವಿವರವಾಗಿ ಹೇಳಿಕೊಡಲಾಯಿತು. ಬೆಂಗಳೂರಿನ ಡೇನಿಯಲ್ ಸುಕುಮಾರ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.