ಮಂಗಳವಾರ, ಮೇ 18, 2021
22 °C

ವಿದ್ಯಾರ್ಥಿಗಳ ಆಸಕ್ತಿ ಪ್ರೋತ್ಸಾಹಿಸಿ: ಮಾಡಾಳ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಬೆನ್ನೂರು: ವಿದ್ಯಾರ್ಥಿಗಳ ಆಸಕ್ತಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಅದರಂತೆ ಗ್ರಾಮಾಂತರ ಪ್ರದೇಶದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಆರಂಭಿಸಲು ಪ್ರಯತ್ನಿಸುವುದಾಗಿ  ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ  2011-12 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪದವಿ ತರಗತಿಗಳು ನಡೆಯುತ್ತಿವೆ.ಹೊಸ ಕಟ್ಟಡ ಸ್ಥಾಪನೆಗೆ 8 ಎಕರೆ ಭೂಮಿ ಹಾಗೂ ರೂ 1.20ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆಯೂ ಕೂಡ ಮುಗಿದು ಟ್ರಯಲ್ ಬೇಸ್‌ಮೆಂಟ್ ತೆಗೆಯಲಾಗಿದೆ ಎಂದರು. ಈ ತಿಂಗಳ ಕೊನೆಗೆ ಶಂಕುಸ್ಥಾಪನೆ ನೆರವೇರಿಸುವ ಭರವಸೆ ನೀಡಿದರು.ಇಲ್ಲಿನ ಕುಡಿಯುವ ನೀರಿನ ಯೋಜನೆಯು ಸೆ. 30ರ ವೇಳೆಗೆ ಪ್ರಾಯೋಗಿಕವಾಗಿ ಕಾರ್ಯರಂಭ ಮಾಡಲು ಸೂಚಿಸಲಾಗಿದೆ. ರಸ್ತೆ ಕಾಮಗಾರಿಯು ಶೀಘ್ರದಲ್ಲಿ ಆರಂಭಗೊಳ್ಳುವುವು ಎಂದರು.ಜಿ.ಪಂ. ಸದಸ್ಯೆ ಪ್ರೇಮಾ ಸಿದ್ದೇಶ್, ಎಂ.ಬಿ. ನಾಗರಾಜ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಈ. ಕೃಷ್ಣಪ್ಪ ವಹಿಸಿದ್ದರು.ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ಅನಸೂಯಮ್ಮ ಚಿದಾನಂದ ಮೂರ್ತಿ, ತಾ.ಪಂ. ಸದಸ್ಯ ಜೆ. ರಂಗನಾಥ್, ಗ್ರಾ.ಪಂ. ಅಧ್ಯಕ್ಷ ಸಂತೋಷ್. ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಪಿ. ವಾಗೀಶ್, ಪಿಎಸ್‌ಐ ಲಿಂಗನ ಗೌಡ ಉಪಸ್ಥಿತರಿದ್ದರು.ವಿವಿಧ ಕಾರ್ಯಕ್ರಮಗಳ ಉದ್ಘಾಟನೆ

 ಇಲ್ಲಿನ ಎಸ್‌ಎಸ್‌ಜೆವಿಪಿ ಪಿಯು ಕಾಲೇಜು ಹಾಗೂ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ  ಸಾಂಸ್ಕೃತಿಕ ಹಾಗೂ ಕ್ರೀಡಾ, ವನ ಮಹೋತ್ಸವ, ಸೈಕಲ್ ವಿತರಣೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ. ಸಿದ್ದಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ಮೋತಿ ವೀರಪ್ಪ ಕಾಲೇಜಿನ ಪ್ರಾಂಶುಪಾಲ ಜಿ.ಬಿ. ಚಂದ್ರಶೇಖರಪ್ಪ ಉಪನ್ಯಾಸ ನೀಡಿದರು

ಈಚೆಗೆ ನಿವೃತ್ತರಾದ ಪ್ರಾಂಶುಪಾಲ ಎ.ಬಿ. ಪಾಟೀಲ್ ಹಾಗೂ ಮುಖ್ಯೋಪಾಧ್ಯಾಯ ಇ. ಉಜ್ಜಪ್ಪ ಅವರನ್ನು ಸನ್ಮಾನಿಸಲಾಯಿತು.ಜಿ.ಪಂ. ಸದಸ್ಯೆ ಪ್ರೇಮಾ ಸಿದ್ದೇಶ್, ತಾ.ಪಂ. ಸದಸ್ಯ ಜೆ. ರಂಗನಾಥ್ ಮಕ್ಕಳಿಗೆ ಬೈಸಿಕಲ್ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಶ್ರೀನಿವಾಸ ಮೂರ್ತಿ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಸಂತೋಷ್, ಎ.ಬಿ. ಪಾಟೀಲ್, ಈ. ಉಜ್ಜಪ್ಪ, ಪ್ರೇಮಾ ಸಿದ್ದೇಶ್ ಮಾತನಾಡಿದರು.  ಪಿ. ವಾಗೀಶ್, ತಾ.ಪಂ.ಅಧ್ಯಕ್ಷೆ ಅನಸೂಯಮ್ಮ ಚಿದಾನಂದಮೂರ್ತಿ ಇದ್ದರು.ಶ್ರೀನಿಧಿ, ಶ್ರೀ ಲಕ್ಷ್ಮೀ ಪ್ರಾರ್ಥಿಸಿದರು, ವೈ. ಗಂಗಾಧರ್ ಸ್ವಾಗತಿಸಿದರು, ಸಿದ್ದೇಶ್ವರ್ ವಂದಿಸಿದರು ಪೈಜ್ನಟ್ರಾಜ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.