ನವದೆಹಲಿ: ಬೇಸಿಗೆಯ ಬಿಸಿ ಏರುತ್ತಿದ್ದಂತೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆಯೂ ಬೀಳಲಿದೆ. ದೇಶದಾದ್ಯಂತ ವಿದ್ಯುತ್ ಸರಬರಾಜು ಸಂಸ್ಥೆಗಳು ನಷ್ಟ ಭರಿಸಿಕೊಳ್ಳಲು ವಿದ್ಯುತ್ ದರ ಏರಿಕೆಗೆ ಮುಂದಾಗಿವೆ.

ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್ಸಿ) ಹಾಗೂ ಕೇಂದ್ರ ಇಂಧನ ಸಚಿವಾಲಯಗಳು ರಾಜ್ಯಗಳ ವಿದ್ಯುತ್ ಮಂಡಳಿಗಳು ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಹೆಚ್ಚುತ್ತಿರುವ ನಷ್ಟ ತುಂಬಿಕೊಳ್ಳುವಂತೆ ಸೂಚನೆ ನೀಡಿವೆ.

ಈ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್ ದರ ಏರಿಸುತ್ತಿವೆ.
ಕಳೆದ 18 ತಿಂಗಳಲ್ಲಿ 24 ರಾಜ್ಯಗಳು ವಿದ್ಯುತ್ ದರದಲ್ಲಿ ಶೇ 20ರಿಂದ ಶೇ 37ರವರೆಗೆ ಏರಿಕೆ ಮಾಡಿವೆ.

ಇತ್ತೀಚೆಗಷ್ಟೇ ತಮಿಳುನಾಡು ಹಿಂದಿದ್ದ ದರಕ್ಕಿಂತ ಶೇ 37ರಷ್ಟು ವಿದ್ಯುತ್ ದರ ಏರಿಸಿದೆ. ಬಿಹಾರ, ರಾಜಸ್ತಾನ, ಮಧ್ಯಪ್ರದೇಶಗಳ ಸಹ ಶುಲ್ಕ ಏರಿಸಿವೆ. ಕರ್ನಾಟಕ, ತ್ರಿಪುರಾ ಹಾಗೂ ಪಂಜಾಬ್ ದರ ಏರಿಕೆಯ ಪ್ರಸ್ತಾಪವನ್ನು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಕಳುಹಿಸಿವೆ.

ಬಹುತೇಕ ಎಲ್ಲ ರಾಜ್ಯಗಳ ವಿದ್ಯುತ್ ಮಂಡಳಿಗಳ ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳ ಸ್ಥಿತಿ ಗಂಭೀರವಾಗಿದೆ. ಒಟ್ಟಾರೆ ನಷ್ಟದ ಬಾಕಿ ರೂ 1.16 ಲಕ್ಷ ಕೋಟಿಗಳಷ್ಟಿರುವುದರಿಂದ ವಿದ್ಯುತ್ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಇಂಧನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಲಿದ್ದಲು ಹಾಗೂ ಅನಿಲದ ಕೊರತೆಯಿಂದ ವಿದ್ಯುತ್ ಖರೀದಿ ದರವೂ ಏರುತ್ತಿದ್ದು, ವಿದ್ಯುತ್ ಸರಬರಾಜು ಕಂಪೆನಿಗಳು ಉಳಿದುಕೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ ಎಂದೂ ಈ ಅಧಿಕಾರಿ ಹೇಳಿದ್ದಾರೆ.

ವಿದ್ಯುತ್ ಉತ್ಪಾದನೆಯ ವೆಚ್ಚ ಏರಿದಂತೆ ದರ ಪರಿಷ್ಕರಿಸುವ ಅಧಿಕಾರವೂ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಇರಬೇಕು. ವಿದ್ಯುತ್ ದರ ಏರಿಕೆ, ಮಾರುಕಟ್ಟೆಗೆ ಅನುಗುಣವಾಗಿ ಇರಬೇಕೇ ಹೊರತೂ ಅದು ರಾಜಕೀಯ ನಿರ್ಧಾರವಾಗಬಾರದು ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ವಿದ್ಯುತ್ ಸರಬರಾಜು ಕಂಪೆನಿಗಳ ಆರ್ಥಿಕ ಸ್ಥಿತಿ ಕುರಿತು ಕಳೆದ ವರ್ಷಾಂತ್ಯದಲ್ಲಿ ಸಲಹೆ ನೀಡಿದ್ದ ಶುಂಗ್ಲು ಸಮಿತಿ ಈ ಕಂಪೆನಿಗಳ ನಷ್ಟ ಸರಿದೂಗಿಸಲು ವಿಶೇಷ ನಿಧಿ ಸ್ಥಾಪಿಸುವಂತೆ ಶಿಫಾರಸು ಮಾಡಿತ್ತು.

ಈ ಕಂಪೆನಿಗಳ ಸ್ಥಿತಿಗತಿಯಿಂದ ಚಿಂತಿತರಾಗಿದ್ದ ಕೇಂದ್ರ ವಿದ್ಯುತ್ ಸಚಿವ ಸುಶೀಲ್ಕುಮಾರ್ ಶಿಂಧೆ ಸಹ ಕೇಂದ್ರ ಸರ್ಕಾರ ಅವುಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲು ಯೋಜಿಸುತ್ತಿದೆ ಎಂದಿದ್ದರು.

12ನೇ ಪಂಚ ವಾರ್ಷಿಕ ಯೋಜನೆಯ ಕರಡಿನಲ್ಲಿ ವಿದ್ಯುತ್ ಸಚಿವಾಲಯ, ವಿದ್ಯುತ್ ಕಾಯ್ದೆಗೆ ತಿದ್ದಪಡಿ ತಂದು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ದರ ನಿರ್ಧರಿಸುವ ಅಧಿಕಾರ ನೀಡಬೇಕು ಎಂದು ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.