ವಿಜಯಪುರ: `ರಾಷ್ಟ್ರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವವರಿಗಿಂತಲೂ ರಾಜನೀತಿ ನಿಪುಣರ ಅಗತ್ಯವಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ರಾಷ್ಟ್ರ ಎಂಬ ಮನೋಭಾವನೆಯು ರಾಜಕೀಯ ವ್ಯಕ್ತಿಗಳಲ್ಲಿ ಬೆಳೆಯಬೇಕಿದೆ~ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.`ಗಣಿಗಾರಿಕೆ ಮತ್ತು ಅದಿರು ಸಾಗಣೆ ಸುಂಕ ವಸೂಲಿಯಲ್ಲಿ ಸುಮಾರು 20 ಸಾವಿರ ಕೋಟಿ ರೂ.ನಷ್ಟವಾಗಿದೆ. ಆ ಕುರಿತು ಸುಪ್ರೀಂಕೋರ್ಟ್ ಕೂಡ 5 ಪಟ್ಟು ಅಧಿಕ ದಂಡ ವಸೂಲಿ ಮಾಡಲು ಆದೇಶಿಸಿದೆ.

ಅದರಂತೆ ಸುಮಾರು ಒಂದು ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ರೆಡ್ಡಿ ಸಹೋದರರಿಂದ ವಸೂಲಿ ಮಾಡಬೇಕು. ರಾಜ್ಯ ಅಭಿವೃದ್ಧಿ ಕಾರ್ಯಗಳಿಗೆ ಆಹಣವನ್ನು ಬಳಸಬೇಕು~ ಎಂದು ಅವರು ಆಗ್ರಹಿಸಿದರು.

`ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಬದ್ಧತೆ ಇದ್ದತೆ ಬಿಜೆಪಿ ಸರ್ಕಾರವು ಲೋಕಾಯುಕ್ತ ವರದಿಯನ್ನು ಸಂಪೂರ್ಣ ಅಂಗೀಕರಿಸಿ, ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

`ಕಳೆದ ಮೂರೂ ಕಾಲು ವರ್ಷಗಳ ಆಡಳಿತಾವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿನ ಯಾವೊಂದೂ ಭರವಸೆಯನ್ನು ಈಡೇರಿಸಲಾಗಿಲ್ಲ. 2 ರೂ.ಗೆ ಅಕ್ಕಿ ವಿತರಣೆ, ರೈತರಿಗೆ ನಿರಂತರ ವಿದ್ಯುತ್, ಪ್ರತಿವರ್ಷಕ್ಕೆ 3 ಲಕ್ಷ ನಿವೇಶನದಂತೆ 15 ಲಕ್ಷ ನಿವೇಶನಗಳ ಹಂಚಿಕೆಯಂತಹ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ~ ಎಂದು ಅವರು ಛೇಡಿಸಿದರು.

`ಕೃಷಿಗಾಗಿ ಮಂಡಿಸಿದ ವಿಶೇಷ ಕೃಷಿ ಬಜೆಟ್ ಕೇವಲ ತೋರಿಕೆಯಾಗಿದ್ದು, ಆಯಾಯ ವಲಯಗಳಿಗೆ ನಿಗದಿಯಾದ ಅನುದಾನವನ್ನು ಬಿಡುಗಡೆ ಮಾಡಲಾಗಿಲ್ಲ. ನಿರುದ್ಯೋಗಿ ಭತ್ಯೆ ವಿತರಿಸಲಾಗಿಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಟಾದನಾ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿಲ್ಲ~ ಎಂದು ಅವರು ಆರೋಪಿಸಿದರು.
`ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ಪ್ರಯೋಜನವಾಗಿಲ್ಲ.

ಉದ್ಯೋಗ ಸೃಷ್ಟಿಗೆ ವಿಶೇಷ ಪ್ರಯತ್ನ ನಡೆಯಲಿಲ್ಲ. ರಾಜ್ಯದ ಗಡಿ ಒತ್ತುವರಿ, ಕೆಐಡಿಬಿ, ಬಿಡಿಎ, ಬಿಬಿಎಂಪಿ ಗಳಂತಹ ಎಲ್ಲಾ ಸಂಸ್ಥೆಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ರಸ್ತೆ, ರೈಲ್ವೆ ಮತ್ತಿತರ ಮೂಲಸೌಕರ್ಯಗಳಿಗೆ ಕೇಂದ್ರದ ಸಿಆರ್ಎಫ್ ಅನುದಾನ ಹೊರತುಪಡಿಸಿ ಇನ್ನಾವುದೇ ಅನುದಾನ ಬಳಕೆಯಾಗಿಲ್ಲ~ ಎಂದು ಅವರು ದೂರಿದರು.

`ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರದ ಕನಸು ನನಸಾಗಿಲ್ಲ. ಗಣಿ ಅಕ್ರಮದ ತನಿಖೆಯನ್ನು ಸಂಪೂರ್ಣವಾಗಿ ಸಿಬಿಐಗೆ ಒಪ್ಪಿಸಬೇಕು~ ಎಂದು ಅವರು ಒತ್ತಾಯಿಸಿದರು.`ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು `ಇಟಾಸ್ಕಾ, ಬಳ್ಳಾರಿ ಗಣಿ ಅಕ್ರಮದ ಬಗ್ಗೆ ಬಯಲಿಗೆಳೆದು ಅಂತಿಮ ಘಟ್ಟಕ್ಕೆ ತರುವಲ್ಲಿ ಕಾಂಗ್ರೆಸ್ ಸಮರ್ಥವಾಗಿ ಪ್ರಾಮಾಣಿಕ ಕಾರ್ಯ ನಿರ್ವಹಿಸಿದೆ~ ಎಂದು ಅವರು ಸಮರ್ಥಿಸಿಕೊಂಡರು.

ಕೊಪ್ಪಳ ಉಪಚುನಾವಣೆಯ ಫಲಿತಾಂಶವು ಆಡಳಿತದ ಅಳತೆ ಗೋಲು ಅಥವಾ ಅಭಿವೃದ್ಧಿಯ ಸಂಕೇತವಲ್ಲ. ಬಿಜೆಪಿ ಆಂತರಿಕ ಕಲಹ, ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ಮುಂದಿನ ಸಾಮಾನ್ಯ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ~ ಎಂದು ಅವರು ಭವಿಷ್ಯ ನುಡಿದರು.ಪುರಸಭಾ ಸದಸ್ಯೆ ಅನುಸೂಯಮ್ಮ, ಸದಸ್ಯ ಎಂ.ಸತೀಶ್ಕುಮಾರ್, ಮಾಜಿ ಸದಸ್ಯ ಸಂಪತ್ಕುಮಾರ್, ಮುನಿಚಿನ್ನಪ್ಪ, ರವೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.