ಶನಿವಾರ, ಫೆಬ್ರವರಿ 27, 2021
31 °C
ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ ಹಾಗೂ ಸರಕು ಸಾಗಣೆಯ ಪ್ರಮಾಣ ಏರಿಕೆ

ವಿಮಾನಯಾನ ಮಾರುಕಟ್ಟೆ ದ್ವಿಗುಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನಯಾನ ಮಾರುಕಟ್ಟೆ ದ್ವಿಗುಣ?

ಪ್ಯಾರಿಸ್‌ (ಪಿಟಿಐ): ಭಾರತದಲ್ಲಿನ ವಿಮಾನ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯ ಪ್ರಮಾಣ ಗಣನೀಯ ಏರಿಕೆಯಾಗುತ್ತಿರುವುದರಿಂದ ವಿಮಾನಗಳ ಸಂಖ್ಯೆಯು ಹೆಚ್ಚಳವಾಗಲಿದೆ. ಹೀಗಾಗಿ 2034ರ ವೇಳೆಗೆ ವಿಮಾನಯಾನ ಮಾರುಕಟ್ಟೆಯ ವ್ಯವಹಾರ ದ್ವಿಗುಣವಾಗಲಿದೆ.ದೇಶದಲ್ಲಿ ಕಳೆದ 20 ವರ್ಷಗಳಲ್ಲಿ ವಿಮಾನಯಾನ ಸುಮಾರು ₨3,200 ಕೋಟಿಗೂ ಹೆಚ್ಚು ಬೇಡಿಕೆ ಹೊಂದಿದೆ  ಎಂದು ವಿಮಾನ ತಯಾರಿಕಾ ಸಂಸ್ಥೆ ‘ಏರ್‌ಬಸ್‌’ ತಿಳಿಸಿದೆ.ಭಾರತದಲ್ಲಿ ಸ್ವದೇಶಿ ವಿಮಾನ ಸಂಚಾರ ಸುಮಾರು ಆರು ಪಟ್ಟು ಹೆಚ್ಚಾಗುವ ಮೂಲಕ ವಿಶ್ವದಲ ವೇಗವಾಗಿ ವಿಮಾನಯಾನ ಮಾರುಕಟ್ಟೆ ವ್ಯವಹಾರ ಬೆಳೆಯುತ್ತಿದೆ. ‘ಏರ್‌ಬಸ್‌’ ಅಧ್ಯಯನದ ಪ್ರಕಾರ ಮುಂಬೈ ಹಾಗೂ ನವದೆಹಲಿ ವಿಮಾನನಿಲ್ದಾಣಗಳನ್ನು ವಿಶ್ವದಲ್ಲಿಯೇ  ಅತೀ ಹೆಚ್ಚು ಜನರಿಂದ ಕಿಕ್ಕಿರಿದ ವಿಮಾನನಿಲ್ದಾಣಗಳೆಂದು ಗುರುತಿಸಲಾಗಿದೆ.ಪ್ಯಾರಿಸ್‌ನಲ್ಲಿ ನಡೆದ 51ನೇ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಜಾಗತಿಕ ವಿಮಾನಯಾನ ಮಾರುಕಟ್ಟೆ ಮಾಹಿತಿಯನ್ನು ಬಿಡುಗಡೆ ಮಾಡಿದ ಏರ್‌ಬಸ್‌, ‘1914ರಲ್ಲಿ ವಿಶ್ವದ ಮೊದಲ ವಿಮಾನವನ್ನು ಹಾರಾಟ ನಡೆಸಿದ ನಂತರದಿಂದ ವಾರ್ಷಿಕವಾಗಿ 3.2 ಲಕ್ಷ ವಿಮಾನಗಳು ಹಾರಾಟ ನಡೆಸುತ್ತವೆ. ಈಗ ವಿಮಾನಗಳು ಜನಜೀವನದ ಭಾಗವಾಗಿದೆ ಎಂದು ಅದು ತಿಳಿಸಿದೆ.ಮುಂದಿನ 20 ವರ್ಷಗಳಲ್ಲಿ ವಿಶ್ವದ ವಿಮಾನ ಪ್ರಯಾಣಿಕರ ಸಂಖ್ಯೆ ಪ್ರತಿವರ್ಷ ಸರಾಸರಿ ಸೇ 4.6ರಷ್ಟು ಹೆಚ್ಚಳವಾಗಲಿದ್ದು, 100ಕ್ಕಿಂತಾ ಹೆಚ್ಚು  ಆಸನಗಳುಳ್ಳ 32,600 ವಿಮಾನಗಳ ಅಗತ್ಯವಿದೆ ಎಂದು ತಿಳಿಸಿದೆ.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.