ಶುಕ್ರವಾರ, ಜುಲೈ 30, 2021
21 °C

ವಿವಿಧೆಡೆ ಕಾರ್ಮಿಕ ಶಕ್ತಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕ ಕಾನೂನುಗಳು ದುರ್ಬಲವಾಗಿರುವ ಕಾರಣ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ ವಿಷಾದಿಸಿದರು.ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೆ ಕಾರ್ಮಿಕ ಸಂಘಟನೆಗಳು ಪ್ರಬಲವಾಗಿದ್ದಾಗ ಸರ್ಕಾರ ಅವುಗಳಿಗೆ ಹೆದರುತ್ತಿತ್ತು. ಆದರೆ ಈಗ ಕಾರ್ಮಿಕ ಸಂಘಟನೆಗಳು ಮೊದಲಿನ ಶಕ್ತಿ ಕಳೆದುಕೊಂಡಿವೆ’ ಎಂದರು.ಬಂಡವಾಳಶಾಹಿ ಶಕ್ತಿಗಳು ಇಂದು ಸರ್ಕಾರದ ಜೊತೆ ಸೇರಿ ಕಾರ್ಮಿಕ ಸಂಘಟನೆಗಳನ್ನು ಒಡೆದು ಆಳುತ್ತಿವೆ, ಕಾರ್ಮಿಕ ಸಂಘಟನೆಗಳು ಶಕ್ತಿ ಕಳೆದುಕೊಳ್ಳಲು ಇದೂ ಒಂದು ಕಾರಣ ಎಂದು ವಿಶ್ಲೇಷಿಸಿದರು.ಸರ್ಕಾರ ಕೂಡ ಈಗ ವಿದೇಶಿ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದೆ. ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಕಾರ್ಮಿಕ ಘಟಕಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದರೆ ಕಾರ್ಮಿಕರ ಹಿತರಕ್ಷಣೆ ಸಾಧ್ಯ ಎಂಬುದಾಗಿ ಹೇಳಿದರು.ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಶ್ರೀರಾಮಯ್ಯ ಮಾತನಾಡಿ, ‘ಸರ್ಕಾರ ತನ್ನ ತಾತ್ಸಾರ ಮನೋಭಾವವನ್ನು ಬಿಟ್ಟು ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಮಾಜಿ ಸಚಿವ ಆರ್. ಕೃಷ್ಣಪ್ಪ, ಮಾಜಿ ಶಾಸಕ ಎನ್. ರಾಜಣ್ಣ, ರಾಜೇಶ್ ಗುಂಡೂರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.