ಮಂಗಳವಾರ, ಏಪ್ರಿಲ್ 20, 2021
26 °C

ವಿಶೇಷ ಸ್ಥಾನಮಾನ: ಸರ್ಕಾರಕ್ಕೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದು ಅದರಲ್ಲಿ  ವಿಜಾಪುರ ಜಿಲ್ಲೆ ಸೇರಿಸಬೇಕು ಎನ್ನುವ ಪ್ರಸ್ತಾವವನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಬೇಕಾಗಿದೆ. ಜಿಲ್ಲೆು ಜನರ ಬೇಡಿಕೆಯನ್ನು ಸರ್ಕಾರಕ್ಕೆ  ತಿಳಿಸಲಾಗಿದೆ ಎಂದು ತಹಶೀಲ್ದಾರ ಸೋಮಲಿಂಗ ಗೆಣ್ಣೂರ ತಿಳಿಸಿದರು.ಅವರು ಸಮೀಪದ ಅವರು  ಸಮೀಪದ ಮೂಕಿಹಾಳ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. 371ಕಲಂ ಜಾರಿಯಾಗಿರುವ ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳೊಂದಿಗೆ   ವಿಜಾಪುರ ಜಿಲ್ಲೆಯನ್ನು  ಸೇರಿಸಿ ವಂಚಿತ ಸೌಲಭ್ಯಗಳನ್ನು ಪಡೆದು ಕೊಳ್ಳುವಂತಾಗಬೇಕು.  ಬರದ ಜಿಲ್ಲೆಯ ಹಣೆಪಟ್ಟಿಯಿಂದ ಹೊರಬರಲು ಇದು ಅವಶ್ಯವೆಂಬ ಕಲ್ಲದೇವನಹಳ್ಳಿಯ ಶ್ರಿಶೈಲಗೌಡ ಬಿರಾದಾರ ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದರು.ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಸಾಹೇಬಪಟೇಲ ಮಕಾಸಿ  ಉದ್ಘಾಟಿಸಿದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ವೀರೆಶ ಬಾಗೇವಾಡಿ,  ಗ್ರಾ.ಪಂ ಉಪಾಧ್ಯಕ್ಷೆ ಹೊಳೆವ್ವ ಬಿರಾದಾರ, ಸದಸ್ಯರುಗಳಾದ ನಿಂಗಣ್ಣ ಕುಂಬಾರ, ಜುಲೇಖಾ ಬೇಗಂ ಗುಡ್ನಾಳ,  ಕೆ.ಎಚ್. ಪಟೇಲ, ತಾ.ಪಂ.ಇ.ಒ ಅಕ್ಕಮಹಾದೇವಿ ಹೊಕ್ರಾಣಿ, ಸಿಪಿಐ ವಿಠ್ಠಲ ಏಳಗಿ, ಜಿ.ಪಂ ಎಇಇ ಐ.ಆರ್. ಮುಂಡರಗಿ, ಬಿ.ಇ.ಒ ಎನ್.ವಿ. ಹೊಸೂರ,  ಡಾ.ಎಸ್.ಸಿ. ಚವಧರಿ, ಹೆಸ್ಕಾಂನ ದೊಡಮನಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.