ಮಂಗಳವಾರ, ಜೂನ್ 15, 2021
24 °C

ವಿಶ್ವನಾಥ್‌ ಆಸ್ತಿ ಮೌಲ್ಯ ರೂ 2.14 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು – ಕೊಡಗು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಡಗೂರು ಎಚ್‌. ವಿಶ್ವನಾಥ್‌ ರೂ 2.14 ಕೋಟಿ ಆಸ್ತಿ ಒಡೆಯ, ಇವರ ಪತ್ನಿ ಶಾಂತಮ್ಮ ರೂ 87.10 ಲಕ್ಷ ಆಸ್ತಿಯ ಒಡತಿ. ವೃತ್ತಿ­ಯಲ್ಲಿ ಕೃಷಿಕರು ಎಂದು ಘೋಷಿಸಿ­ಕೊಂಡಿರುವ ಇವರು ಯಾವುದೇ ವಾಹನ ಹೊಂದಿಲ್ಲ ಎಂಬುದೇ ವಿಶೇಷ. 2011– 12ನೇ ಆರ್ಥಿಕ ವರ್ಷದಲ್ಲಿ ವಿಶ್ವನಾಥ್‌ ಅವರು ರೂ 19,55,520 ಮತ್ತು ಪತ್ನಿ ರೂ 37,46,510 ಆದಾಯ ತೋರಿಸಿದ್ದಾರೆ.ವಿಶ್ವನಾಥ್‌ ರೂ 19.76 ಲಕ್ಷದ  ಪೀಠೋಪಕರಣ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಹೊಂದಿ­ದ್ದಾರೆ. ಮೈಸೂರಿ­ನಲ್ಲಿ ಅಪಾರ್ಟ್‌­ಮೆಂಟ್‌ ಸೇರಿದಂತೆ 12 ವಾಣಿಜ್ಯ ಕಟ್ಟಡ (2721 ಚದರ ಅಡಿ) ಇದ್ದು, ಇದರ ಮೌಲ್ಯ ರೂ 1.30 ಕೋಟಿ ಆಗಿದೆ. ಕೆ.ಆರ್‌. ನಗರದಲ್ಲಿ ರೂ 50 ಲಕ್ಷ ಮೌಲ್ಯದ (3,500 ಚದರ ಅಡಿ) ಮನೆ ಹೊಂದಿದ್ದಾರೆ.ಇವರ ಹೆಸರಿನಲ್ಲಿ ರೂ 15 ಲಕ್ಷ ಬೆಲೆ ಬಾಳುವ 11 ಎಕರೆ 17 ಗುಂಟೆ ಜಮೀನು, ಪತ್ನಿ ಹೆಸರಿನಲ್ಲಿ ರೂ 20 ಲಕ್ಷ ಬೆಲೆ ಬಾಳುವ 21 ಎಕರೆ 38 ಗುಂಟೆ ಕೃಷಿ ಭೂಮಿ ಇದೆ.ಪತ್ನಿ ಹೆಸರಿನಲ್ಲಿಯೇ  ಮೈಸೂರಿನ ದೇವ­ನೂರು 3ನೇ ಹಂತದಲ್ಲಿ ರೂ 20 ಲಕ್ಷ ಮೌಲ್ಯದ (60x40) ನಿವೇಶನ ಇದೆ. ಇವರು ಮೈಸೂರು ಜಿಲ್ಲೆಯ ಕೆ.ಆರ್‌. ನಗರದ ವಿನಾಯಕ ಬ್ಲಾಕಿನ ನಿವಾಸಿ ಆಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.