ತುಮಕೂರು: ‘ವಿಶ್ವೇಶ್ವರಯ್ಯ ಜಲ ನಿಗಮವನ್ನು ಹೊಸದಾಗಿ ರಚನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ’ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ಸೋಮವಾರ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಹಾಗೂ ಎತ್ತಿನ ಹೊಳೆ ನೀರಾವರಿ ಯೋಜನೆ ಈ ಎರಡು ಮಾತ್ರಕ್ಕೆ ಹೊಸದಾಗಿ ವಿಶ್ವೇಶ್ವರಯ್ಯ ಜಲ ನಿಗಮವನ್ನು ರಚನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

‘ನಿಗಮ ರಚನೆ ಮಾಡುವುದರಿಂದ ಉದ್ದೇಶಿತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ’ ಎಂದು ನುಡಿದರು.

‘ಕೃಷ್ಣಾ ಕಣಿವೆಯ ಸ್ಕೀಂ ‘ಎ’ ಮತ್ತು ‘ಬಿ’ಯಡಿ ಲಭಿಸಿದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಒಟ್ಟು 29.9 ಟಿಎಂಸಿ ಅಡಿ ನೀರು ಬಳಕೆಗೆ ಭದ್ರಾ ಮೇಲ್ದಂಡೆ ಪರಿಷ್ಕೃತ ಯೋಜನೆ ರೂಪಗೊಂಡಿದೆ. ಇದು ₹12,340 ಕೋಟಿ ಮೊತ್ತದ ಯೋಜನೆಯಾಗಿದೆ. ಆಡಳಿತಾತ್ಮಕ ಅನುಮೋದನೆಯೂ ಸಿಕ್ಕಿದೆ’ ಎಂದರು.

‘ಇದರಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಹಾಗೂ ದಾವಣಗೆರೆ ಜಿಲ್ಲೆಯ ಕೆಲ ತಾಲ್ಲೂಕುಗಳಿಗೆ 9.9 ಟಿಎಂಸಿ ನೀರು ಲಭಿಸಲಿದೆ. ಇದರಲ್ಲಿ 6.5 ಟಿಎಂಸಿ ತುಮಕೂರು ಜಿಲ್ಲೆಗೆ ದೊರಕಲಿದೆ’ ಎಂದರು.

‘ಇದರಿಂದ 367 ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ವೃದ್ಧಿ ಮತ್ತು ಕೃಷಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಅಜ್ಜಂಪುರದ ಬಳಿ ಭದ್ರಾ ನಾಲೆ ಎರಡು ಭಾಗವಾಗುತ್ತದೆ. ಒಂದು ನಾಲೆ ತುಮಕೂರು ಭಾಗವಾದರೆ ಇನ್ನೊಂದು ನಾಲೆ ಚಿತ್ರದುರ್ಗ ಭಾಗವಾಗಿರುತ್ತದೆ’ ಎಂದು ನುಡಿದರು.

‘ಸರ್ಕಾರವು ಭದ್ರಾ ಯೋಜನೆಯನ್ನು ಒಂದು ರಾಷ್ಟ್ರೀಯ ಯೋಜನೆಯಾಗಿ ಮಾಡಲೂ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ತಿಳಿಸಿದರು.

‘ಅದೇ ರೀತಿ ಪಶ್ಚಿಮ ಘಟ್ಟದ ಎತ್ತಿನಹೊಳೆ ಯೋಜನೆಗೆ ₹ 12,912 ಕೋಟಿ ಒದಗಿಸಲು ಆಡಳಿತಾತ್ಮ ಮಂಜೂರಾತಿ ನೀಡಲಾಗಿದೆ. ಯೋಜನೆಯಡಿ ಒಟ್ಟು 24 ಟಿಎಂಸಿ ನೀರನ್ನು 527 ಕೆರೆಗಳಿಗೆ ಒದಗಿಸಬಹುದಾಗಿದೆ. ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರು ಕಲ್ಪಿಸುವುದು ಪ್ರಮುಖ ಉದ್ದೇಶವಾಗಿದೆ’ ಎಂದರು.

ಚಿಕ್ಕಬಳ್ಳಾಪುರ ಕೋಲಾರ, ಚಿಕ್ಕಮಗಳೂರು ಜಿಲ್ಲೆ ಕೆಲ ಪ್ರದೇಶ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಅನೇಕ ತಾಲ್ಲೂಕುಗಳ ನೀರಿನ ಬವಣೆ ತಪ್ಪಿಸಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಚುನಾವಣೆ ಗಿಮಿಕ್ ಬೇಡ:
‘ಬೆಂಗಳೂರಲ್ಲಿ ಸೈನಿಕರ ಬಗ್ಗೆ ಕೆಲವರು ಸಲ್ಲದ ಮಾತು ಆಡಿದ್ದಾರೆ ಎಂದು ಪ್ರತಿಭಟನೆ ಮಾಡುತ್ತಿರುವವರು ದುರುದ್ದೇಶ ಅಡಗಿದೆ. ಇದೊಂದು ಶಾಂತಿ ಕದಡುವ ಪ್ರಯತ್ನ ಬಿಟ್ಟರೆ ಬೇರೆ ಇನ್ನೇನೂ ಇಲ್ಲ. ಕಾಲೇಜುಗಳಲ್ಲಿ ಇಂಥದಕ್ಕೆ ಅವಕಾಶ ಕೊಡಲೇಬಾರದು. ವಿದ್ಯಾರ್ಥಿಗಳ ಮನಸ್ಸು ಕಲಕಿ ತಪ್ಪುದಾರಿಗೆಳೆಯುವ ಹುನ್ನಾರವೂ ಇರುತ್ತದೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಇಂಥ ಗಿಮಿಕ್ ಮಾಡುತ್ತಾರೆ. ಇಂಥದ್ದಕ್ಕೆಲ್ಲ ಅವಕಾಶ ಕೊಡಬಾರದು’ ಎಂದು ಜಯಚಂದ್ರ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.