ಶನಿವಾರ, ಏಪ್ರಿಲ್ 17, 2021
30 °C

ವೀವ್ಸ್ ಇಂಡಿಯಾ ವಸ್ತ್ರ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಮಳಿಗೆಯಲ್ಲಿ ಕೋಲ್ಕತ್ತಾದ ಬೊಟಿಕ್ ಸೀರೆಗಳು, ಮತ್ತೊಂದರಲ್ಲಿ  ಹುಬ್ಬಳ್ಳಿಯ ಕಾಟನ್ ಸೀರೆಗಳು, ಮಗದೊಂದರಲ್ಲಿ ಮಧ್ಯಪ್ರದೇಶದ ಪ್ರಸಿದ್ಧ ಚಂದೇರಿ ಸೀರೆಗಳು... ಎತ್ತ ಕಣ್ಣು ಹಾಯಿಸಿದರೂ ಬಣ್ಣಬಣ್ಣದ ಕುಸುರಿ ಕಲೆಯ ಸೀರೆಗಳು ಕಣ್ತುಂಬಿಕೊಳ್ಳುತ್ತವೆ. ಅಂದಹಾಗೆ ದೇಶದ ನಾನಾ ರಾಜ್ಯಗಳ ನೇಕಾರರಿಂದ ಸಿದ್ಧಗೊಂಡ ಸುಂದರ ವಸ್ತ್ರಗಳ ಮಾರಾಟ ಮೇಳವು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ.ಕೃಷ್ಣ ಖಾದಿ ಗ್ರಾಮೋದ್ಯೋಗ ಸಂಘಟನೆ ಭಾನುವಾರದವರೆಗೆ (ಆ.12) ಮೇಳವನ್ನು ಆಯೋಜಿಸಿದೆ. ಇಲ್ಲಿ ದೇಶದ ವಿವಿಧೆಡೆಯ ನೇಕಾರರಿಂದ ಸಿದ್ಧವಾಗಿರುವ ರೇಷ್ಮೆ ಮತ್ತು ಹತ್ತಿ ಬಟ್ಟೆಗಳು ಪ್ರದರ್ಶನಗೊಳ್ಳಲಿವೆ.  ಶಾಂತಿನಿಕೇತನ್‌ನ ಕಾಂತಾ ರೇಷ್ಮೆ ಸೀರೆಗಳು, ಹತ್ತಿ ಸೀರೆಗಳು ಮತ್ತು ಅಪ್ಪಟ ರೇಷ್ಮೆಯ ಪ್ರಿಂಟೆಡ್ ಸೀರೆಗಳು ಹೆಂಗಳೆಯರನ್ನು ಆಕರ್ಷಿಸುತ್ತಿವೆ.

 

ಅಲ್ಲದೇ ಹುಬ್ಬಳ್ಳಿಯ ಕಾಟನ್ ಸೀರೆಗಳು, ಪಶ್ಚಿಮ ಬಂಗಾಳದ ಬೊಟಿಕ್ ಸೀರೆ ಮತ್ತು ಭಾಗಲ್‌ಪುರದ ರೇಷ್ಮೆ ದಿರಿಸಿನ ವಸ್ತ್ರಗಳು ಹಾಗೂ ಬಿಹಾರದಲ್ಲಿ ತಯಾರಾದ `ಹ್ಯಾಂಡ್‌ಬ್ಲಾಕ್ ಪ್ರಿಂಟ್~, ಖಾದಿ ಸಿಲ್ಕ್, ಚೂಡಿದಾರ್ ಸಿಲ್ಕ್ ವಸ್ತ್ರಗಳು ಇಲ್ಲಿ ವಿವಿಧ ಶ್ರೇಣಿಯಲ್ಲಿ ಆಯ್ಕೆಗೆ ಲಭ್ಯ.ಮಧ್ಯಪ್ರದೇಶದ ಪ್ರಸಿದ್ಧ ಚಾಂದೇರಿ ಮತ್ತು ರೇಷ್ಮೆ ಸೀರೆಗಳು ಹಾಗೂ ಸೂಟ್‌ಗಳು, ಉತ್ತರ ಪ್ರದೇಶದ ಹೆಸರಾಂತ ಬನಾರಸ್ ರೇಷ್ಮೆ ಸೀರೆ, ಜಮ್ದೋನಿ ರೇಷ್ಮೆ ಸೀರೆಗಳ ದೊಡ್ಡ ಸಂಗ್ರಹವೇ ಇಲ್ಲಿದೆ. ರೇಷ್ಮೆ ಸೀರೆ ಖರೀದಿಸಿದ ಹೆಂಗಳೆಯರಿಗೆ ಹೈದರಾಬಾದ್‌ನ ಹವಳ, ಮುತ್ತಿನ ಸಂಗ್ರಹವೂ ಕಣ್ಮನ ಸೆಳೆಯುತ್ತವೆ.`ಬಡತನ ರೇಖೆಗಿಂತ ಕೆಳಗಿರುವ ನೇಕಾರರಿಗೆ ಸೂಕ್ತ ವೇದಿಕೆ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶ. ಹಾಗಾಗಿ ಈ ಬೃಹತ್ ರೇಷ್ಮೆ ಮತ್ತು ಹತ್ತಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದೇವೆ~ ಎನ್ನುತ್ತಾರೆ ಆಯೋಜಕ ಸಂಜಯ್ ಕುಮಾರ್ ಗುಪ್ತಾ.ಪ್ರದರ್ಶನ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.