ಶುಕ್ರವಾರ, ಜನವರಿ 24, 2020
17 °C

ವೃದ್ಧ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:  ವೃದ್ಧನನ್ನು  ಮಾರಕಾಸ್ತ್ರದಿಂದ ಕೊಚ್ಚಿ  ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಚಿಗಟೇರಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತ ವೃದ್ಧನನ್ನು ದೊಡ್ಡನಗೌಡರ ಮಲ್ಲನಗೌಡ (65) ಎಂದು ಗುರುತಿಸಲಾಗಿದೆ.

ಕಣದ ಮನೆಯಲ್ಲಿ ಮಲಗಿರುವಾಗ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕೊಲೆಗೀಡಾದ ಮಲ್ಲನಗೌಡರ ಅವರ ಸಹೋದರ ಉತ್ತಂಗಿ ಕೊಟ್ರಗೌಡ ನೀಡಿದ ದೂರಿನ ಅನ್ವಯ ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಧಾಮಣಿ, ಹರಪನಹಳ್ಳಿ ಠಾಣೆಯ ಪಿಎಸ್‌ಐ ವಸಂತ ವಿ. ಅಸೋದಿ, ಪಿಎಸ್‌ಐ ಸೋಮ್ಲಾನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿಕ್ರಿಯಿಸಿ (+)