ವೆಬ್‌ಸೈಟ್: ದತ್ತು ಸ್ವೀಕಾರ ಇನ್ನಷ್ಟು ಪಾರದರ್ಶಕ

7

ವೆಬ್‌ಸೈಟ್: ದತ್ತು ಸ್ವೀಕಾರ ಇನ್ನಷ್ಟು ಪಾರದರ್ಶಕ

Published:
Updated:

ನವದೆಹಲಿ (ಪಿಟಿಐ): ಕೇಂದ್ರೀಯ ದತ್ತು ಸಂಪನ್ಮೂಲ ಸಂಸ್ಥೆಯು (ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಏಜೆನ್ಸಿ-ಸಿಎಆರ್‌ಎ) ಸೋಮವಾರ ವೆಬ್‌ಸೈಟ್ ಆರಂಭಿಸಿದ್ದು, ಇದರಿಂದ ದೇಶದಾದ್ಯಂತ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ಇನ್ನಷ್ಟು ಸುಲಭ ಮತ್ತು ಪಾರದರ್ಶಕವಾಗಲಿದೆ.ಈ ವೆಬ್‌ಸೈಟ್‌ಗೆ ‘ಕ್ಯಾರಿಂಗ್ಸ್’  ಎಂಬ ಹೆಸರಿಡಲಾಗಿದೆ. ಸಿಆರ್‌ಆರ್‌ಎ  ಆನ್‌ಲೈನ್ ಮೂಲಕ ಈ ವೆಬ್‌ಸೈಟ್‌ನ ಮೇಲ್ವಿಚಾರಣೆ ನಡೆಸಲಿದ್ದು, ರಾಷ್ಟ್ರಮಟ್ಟದಲ್ಲಿ ನಡೆಯುವ ದತ್ತು ಸ್ವೀಕಾರ ಮಾಹಿತಿಗಳು ಇದರಲ್ಲಿ ಲಭ್ಯವಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಕೃಷ್ಣಾ ತೀರಥ್ ಅವರು ಈ ವೆಬ್‌ಸೈಟ್ ಉದ್ಘಾಟಿಸಿದರು.

ದೇಶದಲ್ಲಿ ಒಟ್ಟು 326 ದತ್ತು ಕೇಂದ್ರಗಳಿದ್ದು, 172 ಕೇಂದ್ರಗಳು ‘ಕ್ಯಾರಿಂಗ್ಸ್’ನಲ್ಲಿ ನೋಂದಾಯಿಸಿಕೊಂಡಿವೆ.ದತ್ತು ಸ್ವೀಕಾರ ಶುಲ್ಕವನ್ನೂ ಪರಿಷ್ಕರಿಲಾಗಿದೆ. ದೇಶದಲ್ಲಿ ದತ್ತು ಸ್ವೀಕಾರಕ್ಕೆ ಇದುವರೆಗೆ ಇದ್ದ 25 ಸಾವಿರ ರೂಪಾಯಿ ಶುಲ್ಕವನ್ನು 45 ಸಾವಿರಕ್ಕೆ ಹೆಚ್ಚಿಸಲಾಗಿದ್ದರೆ, ವಿದೇಶಿಯರು ದತ್ತು ಸ್ವೀಕಾರಕ್ಕೆ ಇದ್ದ ಶುಲ್ಕವನ್ನು 3,500 ಡಾಲರ್‌ನಿಂದ  5 ಸಾವಿರ ಡಾಲರ್‌ಗೆ ಹೆಚ್ಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry