ಚನ್ನರಾಯಪಟ್ಟಣ: ಸಾಮಾಜಿಕ, ಆರ್ಥಿಕ ಮತ್ತು ಜಾತಿ ಜನಗಣತಿಗೆ ನೇಮಕವಾಗಿರುವ ಡಾಟಾ ಎಂಟ್ರಿ ಆಪರೇಟರ್ಗಳು ವೇತನ ತಾರತಮ್ಯ ನೀತಿ ಹೋಗಲಾಡಿಸುವಂತೆ ಆಗ್ರಹಿಸಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಡಿವೈಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಆಪರೇಟರ್ಗಳು ಮಾತನಾಡಿ, ಒಂದು ತಿಂಗಳ ಕಾಲ ಗಣತಿ ಕಾರ್ಯ ನಡೆಯಲಿದ್ದು, 3500 ರೂ. ವೇತನ ನೀಡುವುದಾಗಿ ಸಂಯೋಜಕಕರು ತಿಳಿಸಿದ್ದರು. ಕೆಲಸ ಹೆಚ್ಚಾದರೆ ಹೆಚ್ಚು ವೇತನ ಮಾಡುವುದಾಗಿ ಭರವಸೆ ನೀಡಿದ್ದರು.

ಆದರೆ, ಪ್ರತಿಮನೆಯ ಮಾಹಿತಿ ಪಡೆಯಬೇಕಾದರೆ ಕನಿಷ್ಠ 20 ನಿಮಿಷ ಬೇಕು, ಹೀಗಾಗಿ ಒಂದು ತಿಂಗಳಿಗೆ ನಿಗದಿಪಡಿಸಿದ್ದ ಕೆಲಸ ಈಗ ಎರಡುವರೆ ತಿಂಗಳು ಆಗಿದೆ. ಈಗಾಗಲೇ ಶೇ. 89 ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಕೆಲಸ ಜಾಸ್ತಿಯಾದ್ದರಿಂದ ಕನಿಷ್ಠ 6,500 ರೂ. ವೇತನ ಬಿಡುಗಡೆಮಾಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನಲ್ಲಿ 104 ಮಂದಿ ಡಾಟಾ ಎಂಟ್ರಿ ಆಪರೇಟರ್ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ವೇತನ ಪತ್ರದಲ್ಲಿ ಸಹಿ ಮಾಡುವ ಮುಂದಿನ ಜಾಗವನ್ನು ಖಾಲಿ ಬಿಡಲಾಗಿದೆ. ಇದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಅದನ್ನು ಖಾಲಿ ಬಿಡದೆ ಎಷ್ಟು ವೇತನ ನೀಡಲಾಗುತ್ತದೆ ಎಂಬುದನ್ನು ನಮೂದಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಕಚೇರಿಗೆ ಕರೆಸಿಕೊಂಡು ಮಾತನಾಡಿದ ತಹಶೀಲ್ದಾರ್ ಬಿ.ಎನ್. ವರಪ್ರಸಾದ ರೆಡ್ಡಿ, `ನೇಮಕವಾಗುವ ವೇಳೆ 3,500 ರೂ. ವೇತನ ನೀಡಲಾಗುವುದು ಎಂದು ತಿಳಿಸಲಾಗಿತ್ತು.

ಈಗ ಕೆಲಸ ಜಾಸ್ತಿಯಾಗಿದೆ. ಈಗಾಗಲೇ ಈ ಯೋಜನೆಯ ಸಂಯೋಜಕ ರಮಾಕಾಂತ್ ಜತೆ ಚರ್ಚಿಸಲಾಗಿದ್ದು ಅವರು 5 ಸಾವಿರ ರೂ. ವೇತನ ನೀಡಲು ಒಪ್ಪಿಗೆ ನೀಡಿದ್ದಾರೆ~ ಎಂದರು. ಡಿವೈಎಫ್ಐ ಮುಖಂಡರಾದ ರಾಘವೇಂದ್ರ, ವಾಸು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.