ಗುರುವಾರ , ಮೇ 13, 2021
36 °C

ವೇತನ ತಾರತಮ್ಯ ನಿವಾರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ವೇತನ ತಾರತಮ್ಯವನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶಿಕ್ಷಕರ ದಿನವಾದ ಸೋಮವಾರ ಧರಣಿ ನಡೆಸಿದರು.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ವೇತನ ತಾರತಮ್ಯ ನಿವಾರಿಸುವಂತೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ಮಾತನಾಡಿ, 1998ರಿಂದ ಈಚೆಗೆ ಪದವಿ ಮತ್ತು ಪದವಿ ಪೂರ್ವ ಉಪನ್ಯಾಸಕರ ವೇತನದಲ್ಲಿ ಭಾರಿ ತಾರತಮ್ಯ ಉಂಟಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ಶಿಕ್ಷಕರ ದಿನಾಚರಣೆಯ ದಿನದಂದೇ ಕರಾಳದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.4 ಹಾಗೂ 5ನೇ ವೇತನ ಆಯೋಗದಲ್ಲಿ ಉಂಟಾಗಿರುವ ಈ ತಾರತಮ್ಯ ನೀತಿಯನ್ನು ಮುಂದಿನ 6ನೇ ವೇತನ ಆಯೋಗದಲ್ಲಿ ಸರಿದೂಗಿಸುವಂತೆ ಮನವಿ ಮಾಡಿದ ಅವರು ಕೇವಲ ಮಡಿಕೇರಿಯಲ್ಲಿ ನೀಡುತ್ತಿರುವ ಗಿರಿಜನ ಭತ್ಯೆಯನ್ನು ಇತರ ಭಾಗಗಳಲ್ಲಿಯೂ ನೀಡುವಂತೆ ಅವರು ಒತ್ತಾಯಿಸಿದರು.

 

ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಪದವಿ ಮಹಾವಿದ್ಯಾಲಯಗಳಗೆ ಬಡ್ತಿ ನೀಡುವ ಅವಕಾಶ ಕಲ್ಪಿಸಬೇಕು. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು 1991ರಲ್ಲಿ ಸಕ್ರಮಗೊಂಡ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಹಿಂದಕ್ಕೆ ಪಡೆಯುವ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿದರು.ಈ ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಫಿಲಿಪ್ ವಾಸ್, ಹೇಮಂತ್ ಕುಮಾರ್, ಬಿ.ಎಂ.ಬೆಳ್ಳಿಯಪ್ಪ, ಎಸ್.ಬೋಜಣ್ಣರೆಡ್ಡಿ, ಪಿ.ಆರ್.ವಿಜಯ್, ಎಚ್. ಜೆ. ನಾಗರಾಜ್. ಎ.ಎನ್. ಶ್ರೀಲತಾ, ಬಿ.ಡಿ ಸರೋಜ, ಎಚ್.ಆರ್ ಸರ್ವೋತ್ತಮ್, ಎಸ್.ಎಸ್. ಅಪ್ಪಣ್ಣ್‌ಗೋಳ್, ಕೆ.ಜಿ. ಅಶ್ವಿನಿ, ಎಂ. ಆರ್. ಸುರೇಶ್ ಕುಮಾರ್,  ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.