ಶನಿವಾರ, ಜೂನ್ 19, 2021
28 °C

ವೈಯಕ್ತಿಕ ಬದುಕಿನಲ್ಲಿ ಮೂಗು ತೂರಿಸಬೇಡಿ: ನಟಿ ಗೆಯಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಎಎಫ್‌ಪಿ): ‘ನನ್ನ ವೈಯಕ್ತಿಕ ಬದುಕು ನನ್ನದು ಮಾತ್ರ.  ಅದರಲ್ಲಿ  ಮೂಗು ತೂರಿಸುವ ಅಧಿಕಾರ ಯಾರಿಗೂ ಇಲ್ಲ’ ಎಂದು ಫ್ರೆಂಚ್‌ ನಟಿ ಜೂಲಿಯಾ ಗೆಯಟ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಫ್ರಾನ್ಸ್‌ ಅಧ್ಯಕ್ಷ ಫ್ರಾಂಕಾಯಿಸ್‌ ಹಾಲನ್‌ ಅವರೊಂದಿಗೆ ಹೊಂದಿರುವ ಸಂಬಂಧ ಕುರಿತು ಮಾಧ್ಯಮದವರು ಕೆಣಕಿದಾಗ  ಸಿಡಿಮಿಡಿಗೊಂಡ ಅವರು ಈ ರೀತಿ ತಿರುಗೇಟು ನೀಡಿದರು. ಮ್ಯಾನ್‌ಹಟ್ಟನ್‌ನಲ್ಲಿ ನಡೆಯ­ಲಿ­ರುವ ತಮ್ಮ ‘ಸಿನೆಈಸ್ಟ್’ ಸಾಕ್ಷ್ಯ­ಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವ­ಹಿಸಲು ಅವರು ಇಲ್ಲಿಗೆ ಬಂದಿದ್ದಾರೆ.ಹಾಲನ್ ಜತೆಗಿನ ಪ್ರೇಮ ಪ್ರಕರಣ ಬಹಿರಂಗವಾದ ನಂತರ ಗೆಯಟ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದು ಎರಡನೇ ಬಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.