ಬಳ್ಳಾರಿ: ಅಲ್ಲಿ ಭಾಗವಹಿಸಿದ್ದ ಬಹುತೇಕ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕಾಲ ಸಾಮಾಜಿಕ ಕಳಕಳಿಯ ಕುರಿತು ಮನ ವರಿಕೆ ಮಾಡಿಕೊಡಲಾಯಿತು. ಪರಿಸರ ಸಂರಕ್ಷಣೆ, ಸ್ವಾವಲಂಬನೆ, ಮಹಿಳೆಯರ ಮೇಲಿನ ದೌರ್ಜನ್ಯ, ನಿಷ್ಠೆ, ಗೌರವ, ಸಹಬಾಳ್ವೆ, ಸ್ನೇಹ, ಪ್ರೀತಿ, ವಿಶ್ವಾಸ, ಶಿಕ್ಷಣ ಮತ್ತಿತರ ವಿಷಯಗಳ ಕುರಿತು ತಿಳಿವಳಿಕೆ ಮೂಡಿಸಲಾಯಿತು.

ಸ್ಫರ್ಧಾ ಮನೋಭಾವ, ಉನ್ನತ ವಿಚಾರ, ಅತ್ಯುತ್ತಮ ಗುರಿ, ಶ್ರಮ, ಆಟ- ಪಾಠ, ಸಮಾಜ ಸೇವೆ ಕುರಿತು ಪ್ರತಿನಿತ್ಯ ಉಪನ್ಯಾಸ, ಪ್ರಾಯೋಗಿಕ ತರಬೇತಿ ನೀಡುವ ಮೂಲಕ ಎಳವೆ ಯಲ್ಲೇ ಮಕ್ಕಳ ಮನಸ್ಸಿನ ಮೇಲೆ ಸತ್ಪರಿ ಣಾಮ ಉಂಟುಮಾಡುವ ಚಟುವಟಿಕೆ ಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆ ಜೂನ್ 27ರಿಂದ 30 ರವರೆಗೆ ನಗರದ ಪಾಪಯ್ಯ ಹಾಲ್ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವ ಸಮಾವೇಶದಲ್ಲಿ ಭಾಗವಹಿಸಿದ್ದ ಸ್ಕೌಟ್ಸ್, ಗೈಡ್ಸ್, ಸೇವಾದಳದ ವಿದ್ಯಾರ್ಥಿಗಳು, ಎನ್ಸಿಸಿ, ಎನ್ಎಸ್ಎಸ್, ರೋವರ್ಸ್ ಶಿಬಿರಾರ್ಥಿಗಳು ಸೇರಿದಂತೆ ಒಟ್ಟು 186 ವಿದ್ಯಾರ್ಥಿಗಳು ಈ ಎಲ್ಲ ವಿಷಯಗಳ ಬಗ್ಗೆ ಮನನ ಮಾಡಿಕೊಂಡಿದ್ದಲ್ಲದೆ, ಸಮಾವೇಶದ ಸದುದ್ದೇಶದ ಸದ್ವಿನಿ ಯೋಗ ಮಾಡಿಕೊಂಡರು.

ಸಸಿ ನೆಟ್ಟರು: ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ, ದಾವಣ ಗೆರೆ, ಬಳ್ಳಾರಿ, ಗದಗ, ಕೊಪ್ಪಳ, ಬೆಳಗಾವಿ, ರಾಯಚೂರು ಜಿಲ್ಲೆಗಳ ವಿದ್ಯಾರ್ಥಿಗಳು ನಗರದಲ್ಲಿನ 150 ವರ್ಷಗಳಷ್ಟು ಹಳೆಯದಾಗಿರುವ ವಾರ್ಡ್ಲಾ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟರಲ್ಲದೆ, ಈಗಿರುವ ಗಿಡ- ಮರಗಳ ಸುತ್ತ ಹರಡಿದ್ದ ಕಸ- ಕಡ್ಡಿ ಸ್ವಚ್ಛಗೊಳಿಸಿ, ಗೊಬ್ಬರ ಹಾಕಿ, ಸಮರ್ಪಕವಾಗಿ ನೀರು ನಿಲ್ಲಲು ವ್ಯವಸ್ಥೆ ಮಾಡಿದರು.

ಕಾಲೇಜು ಆವರಣದಲ್ಲಿ ಕಸ ಗುಡಿಸಿ, ಕಲ್ಲು, ಮುಳ್ಳು ತೆರವುಗೊಳಿಸಿದ ಈ ಎಲ್ಲ ವಿದ್ಯಾರ್ಥಿಗಳಿಗೆ, ಉಪನ್ಯಾಸಕರು ಸ್ವಚ್ಛತೆಯ ಕುರಿತು ಪಾಠ ಮಾಡಿ ಅರಿವು ಮೂಡಿಸಿದರು.

ಬೇರೆ ಬೇರೆ ಹೆಸರಿನಲ್ಲಿ ಗುರುತಿಸಲಾ ಗುವ ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಎಸ್ಎಸ್, ಎನ್ಸಿಸಿ, ಸೇವಾದಳ, ರೋವರ್ಸ್, ರೇಂಜರ್ಸ್ ಮತ್ತಿತರ ವಲಯಗಳಲ್ಲಿ ಸದಸ್ಯತ್ವ ಪಡೆದು ಸ್ವಯಂ ಸೇವೆಯಲ್ಲಿ ತೊಡಗುವ ವಿದ್ಯಾರ್ಥಿಗಳ ಧ್ಯೇಯವೂ ಒಂದೇ ಆಗಿದೆ. ಈ ಎಲ್ಲರನ್ನೂ ಒಂದೆಡೆ ಸೇರಿಸಬೇಕೆನ್ನುವ ಉದ್ದೇಶ ಈ ಮೂಲಕ ಈಡೇರಿದೆ. ಎಲ್ಲ ಬಗೆಯ ಸ್ವಯಂ ಸೇವಕರ ಕರ್ತವ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯ ಕ್ರಮ ಯಶಸ್ವಿಯಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಆರ್. ವೆಂಕಣ್ಣ ಸಮಾವೇಶದ ಕುರಿತು ಹರ್ಷ ವ್ಯಕ್ತಪಡಿಸಿದರು.

ಕಾನೂನು ತಿಳಿವಳಿಕೆ, ಪರಿಸರ ಕುರಿತ ಜಾಗೃತಿ, ಶಿಕ್ಷಣದ ಮಹತ್ವ, ಸ್ವಯಂ ಸೇವೆ, ಸಮಾಜ ಸೇವೆಯ ಮಹತ್ವವನ್ನು ಅರಿತಿದ್ದಲ್ಲದೆ, ಸಹಬಾಳ್ವೆ, ಸೋದರತ್ವ, ಸ್ನೇಹದ ಕುರಿತೂ ಸಮರ್ಪಕವಾಗಿ ಅರಿಯಲು ಸಮಾವೇಶ ನೆರವಾಯಿತು ಎಂದು ಶಾಲೆ- ಕಾಲೇಜುಗಳಿಂದ ಆಗಮಿ ಸಿದ್ದ ಚಿಣ್ಣರೂ, ಯುವಕ, ಯುವತಿ ಯರೂ ತಿಳಿಸಿದರು.

ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಸಿದ್ಧ ಉಡುಪು ಸಂಶೋಧನೆ, ತರಬೇತಿ, ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರದ ಪ್ರಾಚಾರ್ಯ ರವೀಂದ್ರ ಭಂಡಿವಾಡ ಅವರು ಫ್ಯಾಷನ್ ಡಿಸೈನಿಂಗ್ ಹಾಗೂ ಗಾರ್ಮೆಂಟ್ ಟೆಕ್ನಾಲಜಿ ಪದವಿ ಹಾಗೂ ಉದ್ಯೋಗಾವಕಾಶಗಳ ಕುರಿತು ಉಪ ನ್ಯಾಸ ನೀಡಿ, ವೃತ್ತಿ ಶಿಕ್ಷಣ ಕೋರ್ಸ್ಗಳ ಕುರಿತು ಮಾಹಿತಿ ಒದಗಿಸಿದರು.

`ನೀವೂ ಬೆಳೆಯಿರಿ, ದೇಶವನ್ನೂ ಬೆಳೆಸಿರಿ~ ಎಂಬ ಶೀರ್ಷಿಕೆಯಡಿ ನಡೆದ ಹತ್ತು- ಹಲವು ಕಾರ್ಯಕ್ರಮಗಳಲ್ಲಿ `ಅನಕ್ಷರತೆ ನಿರ್ಮೂಲನೆ~, `ಮಹಿಳೆ ಮತ್ತು ಸ್ವಾವಲಂಬನೆ~, `ಭ್ರಷ್ಟಾಚಾರ ನಿರ್ಮೂಲನೆ~, `ವಸ್ತ್ರಸಂಹಿತೆ~ ಮತ್ತಿತರ ವಿಷಯಗಳ ಬಗ್ಗೆ ತಜ್ಞ ಉಪನ್ಯಾಸಕರು ಸೂಕ್ತ ಮಾಹಿತಿ ನೀಡಿದರು.

ಚರ್ಚಾಕೂಟ, ರಸಪ್ರಶ್ನೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆಯ ಕುರಿತು ಸೂಕ್ತ ತರಬೇತಿ ನೀಡಲಾಯಿತು.

ಎ.ವಿ. ರಾಜೇಶ್, ಎನ್.ಶ್ರೀನಿವಾಸ್, ಟಿ.ಎ. ಮಂಜುನಾಥಾಚಾರ್, ಎಸ್.ಕೆ. ಪ್ರಭಾ, ಸತ್ಯವಾಣಿ, ಆರ್ಥಿಕ ತಜ್ಞ ಬಿ.ಶೇಷಾದ್ರಿ, ಮೆಹಬೂಬ್ ಪಾಷಾ, ಮಲ್ಲೇಶ್ವರಿ, ವಿಜಯಸಿಂಹ, ವಿ.ಪ್ರಭಾ ಕರ್ ಸಮಾವೇಶದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಸೇವೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.