ಭಾನುವಾರ, ಮಾರ್ಚ್ 7, 2021
18 °C

ವ್ಯಾಘ್ರ ತಾಂಡವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾಘ್ರ ತಾಂಡವ!

ತಮಿಳಿನಿಂದ ಕಡತಂದ ‘ಸುಂದರಪಾಂಡ್ಯನ್‌’ನ ಅವತರಣಿಕೆ ‘ರಾಜಾ ಹುಲಿ’ಯ ಯಶಸ್ಸಿನ ಬಳಿಕ ನಿರ್ದೇಶಕ ಗುರು ದೇಶಪಾಂಡೆ ಮತ್ತೊಂದು ರೀಮೇಕ್‌ ಚಿತ್ರ ಕೈಗೆತ್ತಿಕೊಂಡಿದ್ದಾರೆ. ವಿಕ್ರಾಂತ್‌ ನಾಯಕರಾಗಿದ್ದ ‘ಪಂಡಿಯಾ ನಾಡು’ ಸಿನಿಮಾವನ್ನು ಅವರು ‘ರುದ್ರತಾಂಡವ’ ಹೆಸರಿನಲ್ಲಿ ಕನ್ನಡಕ್ಕೆ ತರುತ್ತಿದ್ದಾರೆ.ಇಲ್ಲಿ ರುದ್ರತಾಂಡವ ಆಡಲಿರುವುದು ನಟ ಚಿರಂಜೀವಿ ಸರ್ಜಾ. ‘ರಾಜಾ ಹುಲಿ’ಯಲ್ಲಿ ಮಾಡಿಕೊಂಡಂತೆ ಈ ಚಿತ್ರದಲ್ಲಿಯೂ ಕನ್ನಡದ ವಾತಾವರಣಕ್ಕೆ ಪೂರಕವಾಗಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೇನೆ ಎಂದರು ಗುರು ದೇಶಪಾಂಡೆ. ಬಳ್ಳಾರಿ ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆ ಅವರದು. ಮಹತ್ವದ ಪಾತ್ರವೊಂದಕ್ಕೆ ಗಿರೀಶ್‌ ಕಾರ್ನಾಡ್‌ ಅವರನ್ನು ಸಂಪರ್ಕಿಸಿದ್ದಾರಂತೆ.ನಿರ್ದೇಶಕರ ಹೆಸರು ಚಿತ್ರ ಬಿಡುಗಡೆಯ ಬಳಿಕ ‘ರುದ್ರತಾಂಡವ’ ಗುರು ಎಂದು ಬದಲಾಗುತ್ತದೆ ಎಂಬ ವಿಶ್ವಾಸ ಚಿರಂಜೀವಿ ಸರ್ಜಾ ಅವರದು. ಚಿತ್ರಕಥೆಗೆ ನ್ಯಾಯ ಒದಗಿಸುವಂತೆಯೇ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ ಎಂದ ಚಿರು, ಫೋಟೊಶೂಟ್‌ ವೇಳೆ ಮುಖಕ್ಕೆ ಮೆತ್ತಿಕೊಂಡ ಟಾರು ಎರಡು ದಿನವಾದರೂ ಅಳಿಸಿ ಹೋಗಿರಲಿಲ್ಲ ಎನ್ನುವುದನ್ನು ನೆನಪಿಸಿಕೊಂಡರು.‘ರಾಜಾ ಹುಲಿ’ಯಲ್ಲಿ ಖಳನಾಯಕರಾಗಿದ್ದ ವಸಿಷ್ಠ, ಇಲ್ಲಿಯೂ ತಮ್ಮ ಆರ್ಭಟ ಮುಂದುವರೆಸಲಿದ್ದಾರಂತೆ. ವಿಶಾಲ್‌ ಮತ್ತು ಸಾಯಿಗೋಲ್ಡ್‌ ಪ್ಯಾಲೇಸ್‌ ಮಾಲೀಕ ಶರವಣ ಜೊತೆಗೂಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ಮಾಪಕ ಕೆ. ಮಂಜು ‘ರಾಜಾ ಹುಲಿ’ಯ ಯಶಸ್ಸಿನ ಸಂಭ್ರಮದಲ್ಲಿದ್ದರು. ಅದೇ ಖುಷಿಯಲ್ಲಿ ಗುರು ದೇಶಪಾಂಡೆ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವ ಬಯಕೆಯನ್ನು ಹಂಚಿಕೊಂಡರು. ವಿ. ಹರಿಕೃಷ್ಣ ಸಂಗೀತ, ಕೆ.ಎಂ. ವಿಷ್ಣುವರ್ಧನ್‌ ಛಾಯಾಗ್ರಹಣದ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಚಿತ್ರದ ಫೋಟೊಶೂಟ್‌ ಟ್ರೇಲರ್‌ ಅನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ವಿಷಲ್‌ ಹೊಡೆಯುವ ಮೂಲಕ ವಿಶಿಷ್ಟವಾಗಿ ಟ್ರೇಲರ್‌ ಬಿಡುಗಡೆ ಮಾಡಿದ್ದು ಚಿರು ಸಹೋದರ ಧ್ರುವ ಸರ್ಜಾ. ಸಿನಿಮಾ ಶುರುವಾಗುವುದಕ್ಕೂ ಮುನ್ನವೇ ನಾನು ವಿಷಲ್‌ ಹೊಡೆದಿದ್ದೇನೆ. ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರು ವಿಷಲ್‌ ಹೊಡೆಯುವುದು ಖಚಿತ’ ಎಂದು ಅಣ್ಣನ ಚಿತ್ರಕ್ಕೆ ಧ್ರುವ ಶುಭಹಾರೈಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.