ಗುರುವಾರ , ಮೇ 19, 2022
24 °C

ಶರಣರ ಬೋಧನೆಗಳು ಸಾರ್ವಕಾಲಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿರುವ ಅಮೋಘ ಕೊಡುಗೆ ವಚನ ಸಾಹಿತ್ಯ ಎಂದು ಬಸವಕಲ್ಯಾಣ ಮಠದ ಮಹದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಬಸವಕಲ್ಯಾಣ ಮಠದಲ್ಲಿ ನಡೆದ ಗುರುಪೂರ್ಣಿಮೆ ಚಿಂತನಗೋಷ್ಠಿ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಶರಣರ ಬೋಧನೆಗಳು ಸಾರ್ವಕಾಲಿಕವಾದವು. ಭೋಗ ಮತ್ತು ವಿಲಾಸ ಮನುಷ್ಯನನ್ನು ದುಃಖಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.ಎಚ್.ಸಿ.ಪರಮಶಿವಯ್ಯ ಮಾತನಾಡಿ, ಶರಣರ ವಚನಗಳು ಅನುಭವದ ಸಂಪತ್ತಿನಿಂದ ಕೂಡಿವೆ. ವಿಚಾರ ಕ್ರಾಂತಿಗೆ ವಚನಗಳು ಮೂಲವಾಗಿವೆ ಎಂದು ವಿವರಿಸಿದರು.ದೊರೆಕಾವಲು ಶಿವರುದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಪರಮಶಿವಯ್ಯ ಮತ್ತು ಎಚ್.ಎಸ್.ರುದ್ರೇಶಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಭಂಜನ ಎಜುಕೇಶನ್ ಟ್ರಸ್ಟ್‌ನ ವಿ.ಎನ್.ರಮೇಶ್, ಚಿಕ್ಕ ಅಯ್ಯೂರು ಅನಾಥಾಶ್ರಮದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು. ಎಚ್.ಎಸ್.ರುದ್ರೇಶಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಬಯಂಡಹಳ್ಳಿಯ ಬಿ.ಎಂ.ಬಿ ವಿನಾಯಕ ಕಲಾಬಳಗದ ತಂಡದವರಿಂದ ವಚನ ಗಾಯನ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.