ಶನಿವಾರ, ಏಪ್ರಿಲ್ 17, 2021
31 °C

ಶರೀಫಗಿರಿಯಲ್ಲಿ ಭಾವೈಕ್ಯದ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾಂವ: ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾದ ಸಂತ ಶಿಶುವಿನಹಾಳ ಶರೀಫರ ಜಾತ್ರಾ ಮಹೋತ್ಸವ ಮಂಗಳವಾರ ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಸಡಗರ ಸಂಭ್ರಮದಿಂದ ಜರುಗಿತು.ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಭಾವೈಕ್ಯ ಧ್ವಜಾರೋಹಣ, ಶಿಶುವಿನಹಾಳ ದೇವಸ್ಥಾನದಿಂದ ಶರೀಫಗಿರಿವರೆಗೆ ಕಳಸದ ಮೆರವಣಿಗೆ, ರಥಕ್ಕೆ ಕಳಸಾರೋಹಣ ಮಾಡಿದ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶರೀಫರ ರಥೋತ್ಸವ ನಡೆಯಿತು.ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಲಕ್ಷ್ಮೇಶ್ವರ, ಕಾರವಾರ ಸೇರಿದಂತೆ ಶಿಶುವಿನಹಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಜನರು ಚಕ್ಕಡಿ, ಟ್ಯ್ರಾಕ್ಟರ್, ಟೆಂಪೊ ಹಾಗೂ ಟ್ಯಾಕ್ಸಿಗಳಲ್ಲಿ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಶರೀಫರ ಕರ್ತೃ ಗದ್ದುಗೆಗೆ ಯುವಕರು ದೀಡ್ ನಮಸ್ಕಾರ ಹಾಕುವುದು, ಮಕ್ಕಳ ತುಲಾಭಾರ ನಡೆಸುವದು, ಪ್ರಸಾದ ಸೇವೆ ಸಲ್ಲಿಸುವದು ಹೀಗೆ ಭಕ್ತರು ವಿವಿಧ ಹರಕೆ ಸೇವೆಗಳನ್ನು ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.