ನವದೆಹಲಿ (ಪಿಟಿಐ): ಮಹಿಳೆಯೊಬ್ಬರ ಪಿತ್ತಕೋಶದ ಶಸ್ತ್ರಚಿಕಿತ್ಸೆ ಕಾಲದಲ್ಲಿ ಸೇವಾನ್ಯೂನತೆ ತೋರಿದ್ದಕ್ಕಾಗಿ ಆಕೆಯ ಪತಿಗೆ 5.70 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಪಂಜಾಬ್ ಮೂಲದ ವೈದ್ಯರೊಬ್ಬರಿಗೆ ಆಜ್ಞಾಪಿಸಿದೆ. ಶಸ್ತ್ರಚಿಕಿತ್ಸೆಯ ಸ್ವಲ್ಪ ಹೊತ್ತಿನಲ್ಲೇ ಈ ಮಹಿಳೆ ಹೃದಯಸ್ತಂಭನದಿಂದ ಮೃತರಾಗಿದ್ದರು.

ತಮ್ಮ ಪತ್ನಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ತಾಳಿದ್ದರು ಎಂಬುದಾಗಿ ಮಾಡಿದ ಆರೋಪವನ್ನು ತಳ್ಳಿಹಾಕಿದ ಪಂಜಾಬ್ ರಾಜ್ಯ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೋಶಿಯಾರ್ ಪುರದ ನಿವಾಸಿ ಸುರೇಶ್ ನಂದಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ನಂದಾ ಅವರಿಗೆ ಪರಿಹಾರ ನೀಡುವಂತೆ ಡಾ. ಅನೂಪ್ ಕುಮಾರ್ ಅವರಿಗೆ ಆದೇಶ ನೀಡಿದೆ.

~ವಿಷಯವನ್ನು ವಿವಿಧ ಆಯಾಮಗಳಿಂದ ಪರಿಗಣಿಸಿದ ಬಳಿಕ ಮೃತ ಸುಶೀಲ್ ಕುಮಾರಿ ಅವರ ಶಸ್ತ್ರ ಚಿಕಿತ್ಸೆಗೆ ಮುನ್ನ, ಶಸ್ತ್ರ ಚಿಕಿತ್ಸೆ ಕಾಲ ಹಾಗೂ ನಂತರದ ಚಿಕಿತ್ಸೆ ಕಾಲದಲ್ಲಿ ವೈದ್ಯರು ವಿವಿಧ ಲೋಪಗಳನ್ನು ಎಸಗಿದ್ದಾರೆ ಎಂಬ ತೀರ್ಮಾನಕ್ಕೆ ಬರುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ವೈದ್ಯರ ಪಾಲಿನ ಸ್ಪಷ್ಟ ಸೇವಾ ನ್ಯೂನತೆ ಪ್ರಕರಣ~ ಎಂದು ನ್ಯಾಯಮೂರ್ತಿ ಆರ್. ಸಿ. ಜೈನ್ ಅಧ್ಯಕ್ಷತೆಯ ಪೀಠ ಹೇಳಿತು.

~ಗಂಭೀರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ವರ್ತನೆ ಅನೈತಿಕವಷ್ಟೇ ಅಲ್ಲ ವೈದ್ಯರೊಬ್ಬರಿಂದ ನಿರೀಕ್ಷಿಸಿದಂತಹುದಲ್ಲ~ ಎಂದು ಪೀಠ ಅಭಿಪ್ರಾಯಪಟ್ಟಿತು.

ರಾಜ್ಯ ಗ್ರಾಹಕ ನ್ಯಾಯಾಲಯದ ಆದೇಶವನ್ನು ಈ ಮೂಲಕ ತಳ್ಳಿಹಾಕುವಲ್ಲಿ ಈ ಮೇಲ್ಮನವಿ ಯಶಸ್ವಿಯಾಗಿದೆ. 5.20 ಲಕ್ಷ ರೂಪಾಯಿಗಳ ಪರಿಹಾರ ಮತ್ತು 50,000 ರೂಪಾಯಿಗಳ ಖಟ್ಲೆ ವೆಚ್ಚ ನೀಡುವಂತೆ ನ್ಯಾಯಾಲಯವು ವೈದ್ಯರಿಗೆ ಈ ಮೂಲಕ ಆಜ್ಞಾಪಿಸುತ್ತದೆ~ ಎಂದು ಪೀಠ ಹೇಳಿತು.

ತನ್ನ ದಿವಂಗತ ಪತ್ನಿ ಸುಶೀಲ್ ಕುಮಾರಿಯ ಪಿತ್ತಕೋಶದಲ್ಲಿ ಕಲ್ಲುಗಳು ಕಂಡು ಬಂದ ಹಿನ್ನೆಲೆಯಲ್ಲಿ ಡಾ. ಅನೂಪ್ ಕುಮಾರ್ ಅವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಈ ಚಿಕಿತ್ಸೆ ಮುಂದುವರೆದು 1998ರ ಸೆಪ್ಟೆಂಬರ್ 15ರಂದು ಕಲ್ಲುಗಳನ್ನು ನಿವಾರಿಸಲು ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ನಂದಾ ತಮ್ಮ ಮೇಲ್ಮನವಿಯಲ್ಲಿ ವಿವರಿಸಿದ್ದರು.

ಶಸ್ತ್ರ ಚಿಕಿತ್ಸೆ ಕಾಲದಲ್ಲಿ ಡಾ. ಅನೂಪ್ ಕುಮಾರ್ ತೋರಿದ ನಿರ್ಲಕ್ಷ್ಯದ ಪರಿಣಾಮವಾಗಿ ಶಸ್ತ್ರಚಿಕಿತ್ಸೆಯ ಸ್ವಲ್ಪ ಹೊತ್ತಿನಲ್ಲೇ ಪತ್ನಿ ನಿಧನರಾದರು. ಚಿಕಿತ್ಸೆಗೆ ಮುನ್ನ ಆಕೆ ಶಸ್ತ್ರಚಿಕಿತ್ಸೆಗೆ ಯೋಗ್ಯರಾಗಿದ್ದರೇ ಎಂಬ ಬಗ್ಗೆ ತಪಾಸಣೆ ಕೂಡಾ ನಡೆಸಲಿಲ್ಲ ಎಂದು ನಂದಾ ದೂರಿದ್ದರು. ಇದನ್ನು ನಿರಾಕರಿಸಿದ ಡಾ. ಅನೂಪ್ ಕುಮಾರ್ ಶಸ್ತ್ರ ಚಿಕಿತ್ಸೆಗೆ ಮುನ್ನ ರೋಗಿಯನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿತ್ತು ಮತ್ತು ಅವರು ಶಸ್ತ್ರಚಿಕಿತ್ಸೆಗೆ ಯೋಗ್ಯರಾಗಿದ್ದರು ಎಂಬುದು ಕಂಡು ಬಂದಿತ್ತು ಎಂದು ತಮ್ಮ ಉತ್ತರದಲ್ಲಿ ಪ್ರತಿಪಾದಿಸಿದ್ದರು.

ಏನಿದ್ದರೂ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ವೈದ್ಯ ಅನೂಪ್ ಕುಮಾರ್ ಅವರು ಶಸ್ತ್ರಚಿಕಿತ್ಸೆ ಪೂರ್ವ ಪರೀಕ್ಷೆಗಳನ್ನು ನಡೆಸಲಾಗಿತ್ತು ಎಂಬುದನ್ನು ಋಜುವಾತುಪಡಿಸುವಲ್ಲಿ ಡಾ. ಅನೂಪ್ ಕುಮಾರ್ ವಿಫಲರಾಗಿದ್ದಾರೆ ಎಂದು ಹೇಳಿದ ನ್ಯಾಯಾಲಯ ಅವರ ಪ್ರತಿಪಾದನೆಯನ್ನು ತಳ್ಳಿ ಹಾಕಿತು.

ರೋಗಿಯ ರಕ್ತದ ಒತ್ತಡ, ನಾಡಿ ಬಡಿತ ಮತ್ತಿತರ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂಬುದಾಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ~ಶಸ್ತ್ರಚಿಕಿತ್ಸೆಕರ ಕರ್ತವ್ಯ ಲೋಪ ಇಲ್ಲಿ ಢಾಳಾಗಿ ಎದ್ದು ಕಾಣುತ್ತಿದೆ~ ಎಂದು ಹೇಳಿದೆ.

ಶಸ್ತ್ರಚಿಕಿತ್ಸೆಯ ಬಳಿಕ ಹೃದಯಸ್ತಂಭನದಿಂದ ರೋಗಿ ಮೃತರಾಗಿದ್ದಾರೆ. ಈ ಸಂದರ್ಭದಲ್ಲೂ ಹೃದಯ ತಜ್ಞರ ಜೊತೆ ಸಮಾಲೋಚಿಸದೇ ಇರುವುದು ಅತ್ಯಂತ ಗಂಭೀರ ಲೋಪ ಎಂದು ಹೇಳಿದ ನ್ಯಾಯಾಲಯ ಇದಕ್ಕಾಗಿ ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಇದು ತೀವ್ರತರವಾದ ಸೇವಾಲೋಪವಾಗುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.