ಹೊಳೆನರಸೀಪುರ: ವಾರ್ಷಿಕೋತ್ಸವ ಕಾರ್ಯಕ್ರಮ, ನೃತ್ಯ, ಕವಾಲಿ, ಭರತನಾಟ್ಯ ಕಾರ್ಯಕ್ರಮಗಳು ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತ ಎನ್ನುವ ಕಾಲ ಈಗಿಲ್ಲ. ಪಟ್ಟಣದ ಹಳೇ ಕರ್ನಾಟಕ ಬ್ಯಾಂಕ್ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಇತ್ತೀಚೆಗೆ ನಡೆಸಿದ ವಾರ್ಷಿಕೋತ್ಸವದಲ್ಲಿ ಇಂಥ ಆಕರ್ಷಕ ದೃಶ್ಯಗಳು ಕಾಣಿಸಿಕೊಂಡವು.

ಚಲನಚಿತ್ರಗಳಲ್ಲಿ ಕಲಾವಿದರು ಬಣ್ಣ ಬಣ್ಣದ ವೇಷ ತೊಟ್ಟು ನರ್ತಿಸುವ ರೀತಿಯಲ್ಲಿ ಈ ಶಾಲೆಯ ಮಕ್ಕಳೂ ಮಿಂಚುವ ಬಟ್ಟೆ ಧರಿಸಿ, ಬಣ್ಣದ ಬಣ್ಣದ ಲೈಟ್ಗಳನ್ನು ಬದಿಲಿಸಿಕೊಳ್ಳುತ್ತಾ ನೃತ್ಯ ಮಾಡಿದ್ದು ಪೋಷಕರಲ್ಲೂ ಹೆಮ್ಮೆ ಮೂಡಿಸಿತು.

ಇದು ಸರ್ಕಾರಿ ಶಾಲೆಯೇ ಆದರೂ ಇಲ್ಲಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರ ಸಹಕಾ ರದಿಂದ ವಾರ್ಷಿಕೋತ್ಸವ ಆಕರ್ಷಕವಾಗಿ ಮೂಡಿಬರುವಂತಾಯಿತು.

ನೃತ್ಯ ಗೊತ್ತಿದ್ದ ಮತ್ತು ಆಸಕ್ತಿ ಇದ್ದ ಮಕ್ಕಳಿಗೆ ಕೆಲವು ದಾನಿಗಳೇ ಮಿಣಿ, ಮೀಣಿ ಮಿಂಚುವ ಬಟ್ಟೆಗಳನ್ನು ಕೊಡಿಸಿದರು. ಮಕ್ಕಳು ಕನ್ನಡ, ಹಿಂದಿ ಹಾಡಿನ ಜೊತೆಗೆ ದೇಶ ಭಕ್ತಿಗೀತೆಗಳಿಗೆ ನೃತ್ಯ ಕಲಿಸಿ ಮಕ್ಕಳಿಗೆ ಒಂದು ಭವ್ಯವಾದ ವೇದಿಕೆ ಸೃಷ್ಟಿ ಮಾಡಿಕೊ ಟ್ಟಿದ್ದು ಈ ಶಾಲೆಯ ಶಿಕ್ಷಕರ ಕ್ರೀಯಾಶೀಲತೆಗೆ ಸಾಕ್ಷಿಯಾಗಿತ್ತು.

ಖಾಸಗಿ ಶಾಲೆಗಳ ವಾರ್ಷಿಕೋತ್ಸ ವವನ್ನು ನೋಡಿ `ನಮ್ಮ ಶಾಲೆಯ ಲ್ಲೇಕೇ ಇಂತಹ ಕಾರ್ಯಕ್ರಮ ಮಾಡು ವುದಿಲ್ಲ ?~ಎಂದು ಪುಟ್ಟ ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸರ್ಕಾರಿ ಶಾಲೆಯ ಮಕ್ಕಳು ನಾವೂ ಕಡಿಮೆ ಏನಲ್ಲ ಎಂದು ತಮ್ಮ ನೃತ್ಯ, ನಾಟಕ, ಅಭಿನಯದ ಮೂಲಕ ಸಾಬೀತು ಪಡಿಸಿದರು~ ಎಂದು ಶಾಲಾಭಿವೃದ್ದಿ ಸಮಿತಿ ಸದಸ್ಯರು ಹೆಮ್ಮೆಯಿಂದ ಹೇಳಿಕೊಂಡರು. ಶಾಲೆಯ ಮೇಲೆ ಇವರಿಗಿದ್ದ ಅಭಿಮಾನವನ್ನು ಅವರ ಮಾತು ಸಾಬೀತು ಪಡಿಸಿತು.
ಶಾಲೆಯ ಹಳೆಯ ವಿದ್ಯಾರ್ಥಿ ಉದ್ಯಮಿ ಟಿ. ಶಿವಕುಮಾರ್ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.