ಬೆಂಗಳೂರು: ಕೊಡಗು ಜಿಲ್ಲೆ ಕೂಡಿಗೆ ಕ್ರೀಡಾ ಶಾಲೆ ತಂಡದವರು ಇಲ್ಲಿ ನಡೆಯುತ್ತಿರುವ ಇಂದಿರಾನಗರ ರೋಟರಿ ಕ್ಲಬ್ ಆಶ್ರಯದ ರಾಜ್ಯಮಟ್ಟದ ಅಂತರ ಶಾಲಾ ಹಾಕಿ ಟೂರ್ನಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಫೈನಲ್ ತಲುಪಿದ್ದಾರೆ.

ಅಕ್ಕಿತಿಮ್ಮನಹಳ್ಳಿ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿ.ಎಸ್. ರಾಂಧವ ಸ್ಮಾರಕ ಬಾಲಕರ ವಿಭಾಗದ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲೆ ತಂಡ 3-2 ಗೋಲುಗಳಿಂದ ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಪ್ರೌಢ ಶಾಲೆ ಮೇಲೆ ಅರ್ಹ ಗೆಲುವು ಸಾಧಿಸಿತು. ವಿಜಯಿ ತಂಡದ ಅಭಿಷೇಕ್ 4, 15 ಮತ್ತು 21ನೇ ನಿಮಿಷದಲ್ಲಿ ಚೆಂಡನ್ನು ಗುರಿಮುಟ್ಟಿಸಿ `ಹ್ಯಾಟ್ರಿಕ್~ ಗೌರವಕ್ಕೆ ಪಾತ್ರರಾದರಲ್ಲದೆ ತಮ್ಮ ತಂಡದ ಗೆಲುವಿನ ರೂವಾರಿ ಆದರು. ಎದುರಾಳಿ ತಂಡದ ರಹೀಲ್ (2) ಗೋಲು ತಂದಿತ್ತರು.

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ರಾಷ್ಟ್ರೀಯ ಮಿಲ್ಟ್ರಿ ಶಾಲೆ ತಂಡದವರು 3-0 ಗೋಲುಗಳಿಂದ ಎನ್.ಎ.ಎಲ್. ಕೇಂದ್ರೀಯ ವಿದ್ಯಾಲಯ ಮೇಲೆ ಸುಲಭ ಜಯ ಪಡೆದರು. ವಿಜಯಿ ತಂಡದ ಪಂಕಜ್ ಕುಮಾರ್, ಮೋಹಿತ್ ರಾಜ್, ವಿವೇಕ್ ಕುಮಾರ್ ಚೆಂಡನ್ನು ಗುರಿ ಮುಟ್ಟಿಸಿದರು.

ಬಾಲಕಿಯರ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿಷಪ್ ಕಾಟನ್ ಬಾಲಕಿಯರ ಶಾಲೆ `ಎ~ ತಂಡ 10-0 ಗೋಲುಗಳಿಂದ ಎವರ್ ಶೈನ್ ಶಾಲೆ ಮೇಲೆ ಭರ್ಜರಿ ವಿಜಯ ಸಾಧಿಸಿದರು.

ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಆರ್. ರುಚಿತಾ (2), ಅಂಜನಾ ರೆಡ್ಡಿ (2), ವೆನ್ಸಾ ಫರ್ನಾಂಡಿಸ್ (2), ಮಹಾಲಕ್ಷ್ಮಿ (3), ನೀಳಾ ಪ್ರಭು ಗೋಲು ತಂದಿತ್ತರು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲೆ 3-0 ಗೋಲುಗಳಿಂದ ಎನ್.ಎ.ಎಲ್. ಕೇಂದ್ರೀಯ ವಿದ್ಯಾಲಯ ತಂಡವನ್ನು ಮಣಿಸಿತು. ವಿಜಯಿ ತಂಡದ ಜ್ಯೋತಿ (2), ಕೃತಿಕಾ ಗೋಲುಗಳಿಸಿದರು. ಎರಡೂ ವಿಭಾಗದ ಫೈನಲ್ ಪಂದ್ಯಗಳು ಶನಿವಾರ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.