ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಯಶಸ್ವಿ

ಗುರುವಾರ , ಜೂಲೈ 18, 2019
22 °C

ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಯಶಸ್ವಿ

Published:
Updated:

ಕುಶಾಲನಗರ: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ `ಶಾಲೆಗಾಗಿ ನಾವು - ನೀವು~ ಕಾರ್ಯಕ್ರಮ ಆಚರಿಸಲಾಯಿತು.ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ.ಭಾರತೀಶ್, ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆ, ದಾಸ್ತಾನು ಕೊಠಡಿ, ಶಿಕ್ಷಕರ ಕೊಠಡಿ ಸೇರಿದಂತೆ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು, ಸಮಸ್ಯೆಗಳ ಕುರಿತು ಚರ್ಚಿಸಿದರು.ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಪ್ರಾಂಶುಪಾಲ ಎಸ್.ದೊಡ್ಡಮಲ್ಲಪ್ಪ, ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಎಚ್.ಬಿ. ಶಿವಾನಂದ ಮಕ್ಕಳ ಶಿಕ್ಷಣದ ಹಕ್ಕುಗಳ ಕುರಿತು ಮಾಹಿತಿ ನೀಡಿದರು.ಎಸ್‌ಡಿಎಂಸಿ ಅಧ್ಯಕ್ಷ ಎಂ.ಎ.ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಐ.ಭವಾನಿ, ಉಪಾಧ್ಯಕ್ಷ ಬಿ.ಎಸ್.ಸದಾಶಿವರೈ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪಿ.ಎಂ.ಶಕೀನ, ಮುಖ್ಯ ಶಿಕ್ಷಕಿ ಎಂ.ವೈ.ಮನೋಹರಿ, ಗ್ರಾ.ಪಂ.ಸದಸ್ಯರಾದ ನಿರ್ಮಲ ಶೇಷಪ್ಪ, ಎಸ್.ಪಿ.ಸಂದೀಪ್ ಇತರರು ಇದ್ದರು.ಶಿಕ್ಷಕ ಸಿ.ಟಿ.ಸೋಮಶೇಖರ್ ಸ್ವಾಗತಿಸಿದರು. ಶಿಕ್ಷಕ ಕೆ.ಮೂರ್ತಿ ನಿರ್ವಹಿಸಿದರು. ಶಿಕ್ಷಕ ಎಸ್.ಟಿ.ವೆಂಕಟೇಶ್ ವಂದಿಸಿದರು.  ನಂತರ ಮಕ್ಕಳು ಮತ್ತು ಅತಿಥಿಗಳು, ನಾಗರಿಕರಿಗೆ ಸಿಹಿಯೊಂದಿಗೆ ಬಿಸಿಯೂಟ ಸವಿದರು.

ಇದಕ್ಕೂ ಮೊದಲು ಶಿಕ್ಷಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಜಾಥಾ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry