ಶನಿವಾರ, ಏಪ್ರಿಲ್ 17, 2021
31 °C

ಶಾಲೆಯ ಗೂಡಿನಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಹಿಂಸೆ ಪ್ರಚೋದಿಸುವ, ಅಶ್ಲೀಲತೆ ಬಿಂಬಿಸುವ ಚಲನಚಿತ್ರಗಳನ್ನೇ ಕಾಣುತ್ತೇವೆ. ಮನರಂಜನೆ ಜತೆಗೆ ಸದಭಿರುಚಿ ಚಿಂತನೆ ಬಿತ್ತುವ ಚಲನಚಿತ್ರಗಳ ಕೊರತೆ ಇದೆ. ಹಾಗಿದ್ದರೆ, ಮಕ್ಕಳಿಗೆ ಎಂತಹ ಚಿತ್ರಗಳನ್ನು ತೋರಿಸುವುದು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.ಕಲಾತ್ಮಕ ಹಾಗೂ ಸದಭಿರಚಿ ಚಿತ್ರಗಳು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ.  ಇನ್ನು, ನೋಡುವುದಾರೂ ಹೇಗೆ?. ಇಂಥ ಚಲನಚಿತ್ರಗಳನ್ನ ಮೀಡಿಯಾ ಹೌಸ್ ಸ್ಟುಡಿಯೊ ಟೂರಿಂಗ್ ಟಾಕೀಸ್ ಮೊಟ್ಟ ಮೊದಲ ಬಾರಿಗೆ ಜನರ ಬಳಿಗೆ ಕೊಂಡೊಯ್ಯುವ ವಿಭಿನ್ನ ಪ್ರಯತ್ನಕ್ಕೆ ಚಾಲನೆ ನೀಡಿದೆ.`ಸ್ವರ್ಣ ಕಮಲ~ ರಾಷ್ಟ್ರ ಪ್ರಶಸ್ತಿ ವಿಜೇತ ಅತ್ಯುತ್ತಮ ಮಕ್ಕಳ ಚಿತ್ರ `ಗುಬ್ಬಚ್ಚಿಗಳು~ ಚಲನಚಿತ್ರವನ್ನು ಶಾಲಾ, ಕಾಲೇಜುಗಳಲ್ಲಿ ಪ್ರದರ್ಶಿಸುತ್ತಿದ್ದು, ಇದಕ್ಕೆ ಆರಂಭದಲ್ಲೇ ಒಳ್ಳೆಯ ಪ್ರತಿಕ್ರಿಯೆಯೂ ದೊರತಿದೆ.ಚಲನಚಿತ್ರ ಪ್ರದರ್ಶನ ನಂತರ ಸಂವಾದವೂ  ಇದೆ. ವಿದ್ಯಾರ್ಥಿಗಳಿಂದ ತೂರಿಬರುವ ಪ್ರಶ್ನೆಗಳು ಅಚ್ಚರಿ ಜೊತೆಗೆ ಕುತೂಹಲ ಮೂಡಿಸುತ್ತದೆ. ಈಗಾಗಲೇ, ಪಿಇಎಸ್ ಪ್ರೌಢಶಾಲೆ, ಕೊಪ್ಪದ ಬಾಲಕಿಯರ ಪ್ರೌಢಶಾಲೆ, ಚಿನ್ಮಯ ವಿದ್ಯಾನಿಲಯ, ವಿಕಸನ ಬಾಲಕಾರ್ಮಿಕರ ಶಾಲೆ, ಗೆಜ್ಜಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಹರ್ಷಿ ವಾಲ್ಮಿಕಿ ಶಾಲೆ... ಹೀಗೆ ಜಿಲ್ಲೆಯ ಅನೇಕ   ಶಾಲೆಗಳಲ್ಲಿ `ಗುಬ್ಬಚ್ಚಿಗಳು~ ಮನಬಿಚ್ಚಿ ಚಿಲಿಪಿಲಿಗುಡುತ್ತಿವೆ.ಶುಕ್ರವಾರ ನಗರದ ಪೊಲೀಸ್ ಕಾಲೋನಿಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಈ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ  ನಡೆಯಿತು.`ಸಿನಿಮಾ ಇಂದಿನ ಮಕ್ಕಳಿಗೆ ತೀರಾ ಆಪ್ತವಾಗಬಲ್ಲ ಮಾಧ್ಯಮ. ಬಹುಮುಖಿ ವ್ಯಕ್ತಿತ್ವ, ಚಿಂತನೆ, ಸಂಬಂಧಗಳು, ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ತೆರೆದಿಡುತ್ತದೆ.ಮಚ್ಚು-ಲಾಂಗುಗಳ ಆಚೆಗೂ ಕಲಾತ್ಮಕ, ಮಾನವೀಯ ಅಂಶಗಳನ್ನು ಬಿತ್ತರಿಸುವ ಕೆಲಸ ಮಾಡುವ ಸಿನಿಮಾಗಳಿವೆ.ಅಂತಹ ಸಿನಿಮಾಗಳನ್ನು ಮಕ್ಕಳಿಗೆ ತಲುಪಿಸಿ, ಅವರ ಮನೋಭೌದ್ಧಿಕತೆ ವಿಸ್ತರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಈ ಚಲನಚಿತ್ರದ ಮೂಲಕ ಜೀವ ವೈವಿಧ್ಯತೆ ಸಂರಕ್ಷಿಸುವ ಅಗತ್ಯತೆ ಕುರಿತು, ಕಲಾತ್ಮಕ ಸಿನಿಮಾಗಳನ್ನು ನೋಡುವ ಬಗೆಗೆ ಕುರಿತು ಚರ್ಚೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ~ ಎನ್ನುತ್ತಾರೆ ಟೂರಿಂಗ್ ಟಾಕೀಸ್‌ನ ಸಿಇಒ ಎಂ.ಜಿ.ವಿನಯ್‌ಕುಮಾರ್.`ಸಿನಿಮಾ ವೀಕ್ಷಣೆ ಮಾಡುವ ಶಾಲೆಗಳಲ್ಲಿ ಮಕ್ಕಳಿಂದಲೇ ವೆಚ್ಚವನ್ನು ಸರಿದೂಗಿಸಲಾಗುತ್ತದೆ. ಆದರೆ, ಇಂತಿಷ್ಟೇ ಶುಲ್ಕ ಪಾವತಿಸಬೇಕೆಂಬ ಒತ್ತಾಯವಿಲ್ಲ. ಮನರಂಜನೆ ಜತೆಗೆ ಸದಭಿರುಚಿ, ಉತ್ತಮ ಆಲೋಚನೆ ಬಿತ್ತುವುದು ಕೂಡ ನಮ್ಮ ಪ್ರಯೋಗದ ಉದ್ದೇಶ~ ಎನ್ನುತ್ತಾರೆ.`ಗುಬ್ಬಚ್ಚಿಗಳು~ ಚಲನಚಿತ್ರವನ್ನು ಶಾಲಾ-ಕಾಲೇಜುಗಳಲ್ಲೂ ಪ್ರರ್ದಶಿಸಲು ಟೂರಿಂಗ್ ಟಾಕೀಸ್ ಉದ್ದೇಶಿಸಿದೆ. ಆಸಕ್ತರು, ಮೊ.ಸಂ. 9972391577, 8546848108 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.