ಮಂಗಳವಾರ, ಏಪ್ರಿಲ್ 13, 2021
23 °C

ಶಾಶ್ವತಿ ಕೇಂದ್ರದಲ್ಲಿ ಶಿವನ ವಿಭೂತಿ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಲೋಕ ಕಲ್ಯಾಣ ಕ್ಕಾಗಿ ಶಿವ ವಿಷ ಪ್ರಾಶನ ಮಾಡಿದ ದಿನ ಎಂದು ಹೇಳಲಾಗುವ ಮಹಾ ಶಿವ ರಾತ್ರಿಯ ಅಂಗವಾಗಿ ಶಿವನ ವಿಭೂತಿ ಸೃಷ್ಟಿಸುವ ವಿಶಿಷ್ಟ ಕಾರ್ಯ ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಮುಖ್ಯಸ್ಥ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಮಂಗಳವಾರ ರಾತ್ರಿ ನಡೆಯಿತು.ಪ್ರದೋಷ ಕಾಲದಲ್ಲಿ ಈಶ್ವರ ಹಾಗೂ ನಂದಿ ಪೂಜೆಯೊಡನೆ ಶಿವನ ವಿಭೂತಿ ಸೃಷ್ಟಿ ಕಾರ್ಯಕ್ಕೆ ಚಾಲನೆ ದೊರೆಯಿತು. ಹಸುವಿನ ಸಗಣಿಯಿಂದ ಮಾಡಿದ ಉಂಡೆಗಳನ್ನು 48 ದಿನಗಳ ಕಾಲ (ಒಂದು ಮಂಡಲ)ಒಣಗಿಸಿ, ಬತ್ತದ ಹೊಟ್ಟಿನಲ್ಲಿ ಸೇರಿಸಿ ಅದಕ್ಕೆ ಶೈವ ಸಂಪ್ರದಾಯದ ವಿಧಿ, ವಿಧಾನ ಗಳಂತೆ ಅಗ್ನಿಸ್ಪರ್ಶ ಮಾಡಿದರು. ವೇದ, ಘೋಷಗಳ ನಡುವೆ ತುಪ್ಪದ ದೀಪದಲ್ಲಿ ಮೂಡೆ ಉಂಡೆಗಳ ಗುಡ್ಡೆಗೆ ಅಗ್ನಿಸ್ಪರ್ಶ ಮಾಡಲಾಯಿತು. ಮುತ್ತೈದೆಯರು ವಿಭೂತಿ ಸೃಷ್ಟಿ ಕಾರ್ಯದಲ್ಲಿ ಪಾಲ್ಗೊಂಡು ಸಾಮೂ ಹಿಕ ಪೂಜೆ ನೆರವೇರಿಸಿದರು. ರುದ್ರ ಪಾರಾಯಣ ಜರುಗಿತು.ಸತತ 7 ದಿನಗಳ ಕಾಲ ಸಗಣಿ ಉಂಡೆ ಹಾಗೂ ಬತ್ತದ ಹೊಟ್ಟು ಉರಿದು ವಿಭೂತಿ ಸೃಷ್ಟಿಯಾಗುತ್ತದೆ. ಶಿವ ಭಕ್ತರು ಮುಂದಿನ ಶಿವರಾತ್ರಿ ಹಬ್ಬದ ವರೆಗೆ ಈ ವಿಭೂತಿಯನ್ನೇ ಬಳಸಬೇಕು. ವೈಜ್ಞಾನಿಕವಾಗಿ ವಿಭೂ ತಿಗೆ ದೇಹದ ಉಷ್ಣಾಂಶ ತಗ್ಗಿಸುವ ಶಕ್ತಿ ಇದೆ ಎಂದು ಡಾ.ಭಾನುಪ್ರಕಾಶ್ ಶರ್ಮಾ ತಿಳಿಸಿದರು.

ಸಂಭ್ರಮದ ಮಹಾಶಿವರಾತ್ರಿನಾಗಮಂಗಲ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಪಟ್ಟಣದ ವಿವಿಧ ಶಿವನ ದೇವಾಲಯ ಗಳಲ್ಲಿ ವಿಶೇಷ ಪೂಜೆ ನಡೆಯಿತು. ದೇವರ ವಿಗ್ರಹಗಳನ್ನು ಸುಂದರ ವಾಗಿ ಹೂವಿನಿಂದ ಅಲಂಕರಿಸ ಲಾಗಿತ್ತು. ಪಟ್ಟಣದ ಹೃದಯ ಭಾಗದಲ್ಲಿರುವ ಭುವನೇಶ್ವರ ಸ್ವಾಮಿ ದೇವಾಲಯ, ರುದ್ರನ ಗುಡಿ, ಟಿ.ಬಿ ಬಡಾವಣೆಯ ಮಹದೇಶ್ವರಸ್ವಾಮಿ ದೇವಾಲಯ ಹೀಗೆ ಅನೇಕ ಶಿವನ ದೇವಾಲಯಗಳಲ್ಲಿ ಬೆಳಗಿನಿಂದಲೂ ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆದರು.ಸಂಭ್ರಮದ ಲಕ್ಷ ದೀಪೋತ್ಸವ : ಮಹಾಶಿವರಾತ್ರಿ ಪ್ರಯುಕ್ತ ನಾಗ ಮಂಗಲದ ಲಕ್ಷದೀಪೋತ್ಸವ ಸಮಿತಿ 13ನೇ ವರ್ಷದ ಲಕ್ಷ ದೀಪೋ ತ್ಸವವನ್ನು ಪಟ್ಟಣದ ಪುರಾಣ ಪ್ರಸಿದ್ಧ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಬಹಳ ವಿಜೃಂಭಣೆ ಯಿಂದ ಆಚರಿಸಿತು.ಶಿವನಾಮ ಸ್ಮರಣೆ

ಕೃಷ್ಣರಾಜಪೇಟೆ: ಶಿವರಾತ್ರಿ ಆಚರಣೆ ಯನ್ನು ತಾಲ್ಲೂಕಿನ ಸಂಗಾಪುರದ ಬಳಿ ಯಿರುವ ಸಂಗಮೇಶ್ವರಸ್ವಾಮಿ ದೇವಾ ಲಯದಲ್ಲಿ ಬುಧವಾರ ರಾತ್ರಿ ವಿಶಿಷ್ಟ ವಾಗಿ ಆಚರಿಸಲಾಯಿತು.  ದೇವಾಲಯದ ಆವರಣದಲ್ಲಿ ಆಹೋರಾತ್ರಿ ಭಜನೆ, ಹರಿಕಥೆ, ಕಥಾಕಾಲಕ್ಷೇಪ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ದವು. ಈ ಸಂದರ್ಭದಲ್ಲಿ ಸಂಗ ಮೇಶ್ವರನಿಗೆ ಬಿಲ್ವಾರ್ಚನೆ, ಕ್ಷೀರಾ ಭಿಷೇಕ, ರುದ್ರಾಭಿಷೇಕ ಮತ್ತಿತರ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳು ಕೂಡುವ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಈ ದೇವಾಲಯವನ್ನು ವಿದ್ಯುತ್ ದೀಪ ಗಳಿಂದ ಸುಂದರವಾಗಿ ಅಲಂಕೃತ ಗೊಳಿಸಲಾಗಿತ್ತು. ನೆರೆಯ ಕೃಷ್ಣರಾಜ ನಗರ, ಹೊಳೇನರಸೀಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಭಕ್ತ ಸಮೂಹ ಇಲ್ಲಿ ನೆರೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.