ಇಪ್ಪತ್ತೆರಡು ನಾಟಕ ಕಂಪೆನಿಗಳಿಗೆ ಕ್ರಮಬದ್ಧ ಅನುದಾನ ನೀಡುವ ಮೂಲಕ ಸರ್ಕಾರ ವೃತ್ತಿ ರಂಗಭೂಮಿ ಕಲಾವಿದರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ. ಚಿಂದೋಡಿ ಲೀಲಾ ಅವರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ತಂದು ಈ ಯೋಜನೆ ಆರಂಭಿಸಿದ್ದರು.

ಹಾಗಾಗಿ ಕಳೆದ ಎರಡು ದಶಕಗಳಿಂದ ಈ ಯೋಜನೆ ಆಗಲೇ ಜಾರಿಯಲ್ಲಿದೆ. ಆದರೆ ಅದಕ್ಕೊಂದು ಕ್ರಮಬದ್ಧತೆ ಇರಲಿಲ್ಲ. ಅಸ್ತಿತ್ವದಲ್ಲಿರುವ ಎಲ್ಲ ನಾಟಕ ಕಂಪೆನಿಗಳಿಗೆ ಒಮ್ಮೆ 30 ಲಕ್ಷ ಬಿಡುಗಡೆ ಮಾಡಿದರೆ, ಮತ್ತೊಂದು ವರ್ಷ ಅದು 20 ಲಕ್ಷಕ್ಕೆ ಇಳಿಯುತ್ತಿತ್ತು.

25ವರ್ಷ, 15ವರ್ಷ ಪೂರೈಸಿದ ಕಂಪೆನಿಗಳಿಗೆ 6 ಮತ್ತು 5ಲಕ್ಷ ; 15ವರ್ಷದ ಒಳಗಿನ ಕಂಪೆನಿಗಳಿಗೆ ತಲಾ 3ಲಕ್ಷ ಎಂದು ಸ್ಪಷ್ಟವಾದ ನಿಯಮಾವಳಿಯನ್ನು ಇದೀಗ ರೂಪಿಸಲಾಗಿದೆ. ಮೂರು ವರ್ಷದ ಹಿಂದೆ ನಾಟಕ ಅಕಾಡೆಮಿ ವತಿಯಿಂದ ಆಯೋಗವೊಂದು ನಾಟಕ ಕಂಪೆನಿ ಕ್ಯಾಂಪ್ಗಳಿಗೆ ಸ್ವಯಂ ಭೇಟಿ ನೀಡಿ ಸಲ್ಲಿಸಿದ ವೈಜ್ಞಾನಿಕ ವರದಿಯೇ ಇದಕ್ಕೆ ಆಧಾರ.

ನಾಟಕ ಅಕಾಡೆಮಿಯ ಪ್ರಸಕ್ತ ಅಧ್ಯಕ್ಷೆ ಮಾಲತಿ ಸುಧೀರ್ ಅವರೂ ಸಹ ಅನುದಾನದ ಹೆಚ್ಚಳ ಹಾಗೂ ಸ್ಪಷ್ಟ ನಿಯಮಕ್ಕೆ ಒತ್ತಾಯಿಸಿದ್ದರು. ವೃತ್ತಿ ರಂಗಭೂಮಿ ಕಲಾವಿದರ ಬೇಡಿಕೆಗಳಿಗೆ ಅಧಿಕಾರ ಅವಧಿಯ ಕೊನೆಯ ದಿನಗಳಲ್ಲಾದರೂ ಸರ್ಕಾರ ಸ್ಪಂದಿಸಿದೆ. ಇದೊಂದು ಸ್ವಾಗತಾರ್ಹ ಕ್ರಮ.ಸಚಿವರೇನೋ ಪ್ರತಿವರ್ಷ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಆದರೆ `ಶಾಶ್ವತ~ ಅನುದಾನಕ್ಕೆ ಇದು ಒಳಪಡಲಿದೆಯೇ ಎಂಬುದರ ಬಗ್ಗೆ ಅವರ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ. ಹಾಗೆ ನೋಡಿದರೆ ವೃತ್ತಿರಂಗಭೂಮಿ ಸರ್ಕಾರದ ಅನುದಾನವನ್ನು ನೆಚ್ಚಿಕೊಂಡೇ ಬದುಕಿಲ್ಲ. 140 ವರ್ಷ ಇತಿಹಾಸ ಇರುವ ವೃತ್ತಿರಂಗಭೂಮಿಗೆ ಎಂದಿಗೂ ಪ್ರೇಕ್ಷಕರೇ ಆಧಾರ. ವರ್ಷಪೂರ್ತಿ ನಾಟಕ ಪ್ರದರ್ಶನಗಳಲ್ಲಿ ನಿರತವಾಗಿರುವ ಕಂಪೆನಿಗಳು ತಲಾ 40ರಿಂದ 50ಲಕ್ಷ ವಹಿವಾಟು ನಡೆಸುತ್ತವೆ.

ಹಾಗಾಗಿ ಸರ್ಕಾರದಿಂದ ಪಡೆಯುವ ಒಂದೆರಡು ಲಕ್ಷ ಸಾಂಕೇತಿಕ ಅಷ್ಟೇ. ಇದೂ ಕಳೆದ 20ವರ್ಷಗಳಿಂದಷ್ಟೇ ಜಾರಿಯಲ್ಲಿದೆ.ಸ್ವಾತಂತ್ರ ಹೋರಾಟ, ಕರ್ನಾಟಕ ಏಕೀಕರಣ, ರಂಗಸಂಗೀತದ ಮೂಲಕ ಶಾಸ್ತ್ರೀಯ ಸಂಗೀತ, ಪೌರಾಣಿಕ ನಾಟಕಗಳ ಮೂಲಕ ಮಹಾಕಾವ್ಯಗಳನ್ನು ಜನಸಾಮಾನ್ಯರ ಸ್ವತ್ತಾಗಿಸಿದ ವೃತ್ತಿರಂಗಭೂಮಿ ನಾಡುನುಡಿಗೆ ಸಲ್ಲಿಸಿದ ಸೇವೆ ಅಪಾರ.

ಸಮಯಸ್ಫೂರ್ತಿ, ಹಾಡುಗಾರಿಕೆ, ಪರಿಣತ ಅಭಿನಯ- ಮುಂತಾದ ಕಲಾತ್ಮಕ ಅಂಶಗಳಲ್ಲೂ ವೃತ್ತಿರಂಗಭೂಮಿ ಕೊಡುಗೆ ಹಿರಿದಾದುದು. ಮಾಧ್ಯಮಗಳಪೈಪೋಟಿಯಿಂದ ಇತ್ತೀಚಿನ ವರ್ಷಗಳಲ್ಲಿ ವೃತ್ತಿರಂಗಭೂಮಿ ನಲುಗಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರವೇ ನೆರವಿಗೆ ನಿಂತದ್ದು ನಾಟಕ ಕಂಪೆನಿಗಳಿಗೆ ನೈತಿಕ ಬಲ ತಂದುಕೊಟ್ಟಿತ್ತು.

ಇನ್ನೇನು ನಿಂತೇ ಹೋದವು ಎಂಬ ಕಂಪೆನಿಗಳೂ ಮತ್ತೆ ಜೀವ ಹಿಡಿದವು. ಆದರೆ ಅನಿಶ್ಚಿತತೆಯ ತೂಗುಕತ್ತಿ ಮುಂದೆಯೂ ಇದೆ. ಅದು ತಪ್ಪಬೇಕಾದರೆ `ಶಾಶ್ವತ~ ಅನುದಾನಕ್ಕೆ ಒಳಪಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.