ಭಾನುವಾರ, ಜನವರಿ 26, 2020
28 °C

ಶಾಶ್ವತ ಕುಡಿಯುವ ನೀರಿಗಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿಯನ್ನಾಧರಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.`ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಮುಂತಾದ ಜಿಲ್ಲೆಗಳು ನೀರಿನ ಸಮಸ್ಯೆ ಎದುರಿಸುತ್ತಿವೆ.ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಅನಿವಾರ್ಯ. ಸರ್ಕಾರ ಅಗತ್ಯ ಕ್ರಮ ಕೈಗೊಂಡು,. ಪರಮಶಿವಯ್ಯ ವರದಿ ಬಿಟ್ಟು ಬೇರಾವುದೇ ಯೋಜನೆ ಅನುಷ್ಠಾನಗೊಳಿಸಬಾರದು~ ಎಂದು ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಎಂದರು.`ಪಶ್ಚಿಮ ಘಟ್ಟಗಳ ನದಿಗಳಾದ ಪಯಸ್ವಿನಿ, ಕುಮಾರಧಾರ,ನೇತ್ರಾವತಿ, ಗುರುಪುರ, ಪಾವಂಜೆ, ಸ್ವರ್ಣ, ಸೀತಾ, ವರಾಹಿ ಮುಂತಾದವಿಂದ ವಾರ್ಷಿಕ 1310 ಟಿಎಂಸಿ ನೀರು ಲಭ್ಯವಿದ್ದು ಈ ನೀರಿನ ಶೇ 16ರಷ್ಟು ನೀರು ಬಯಲು ಸೀಮೆಗೆ ಹರಿಸಬೇಕು. ಬಯಲು ಸೀಮೆ 6 ಜಿಲ್ಲೆಗಳ ವ್ಯಾಪ್ತಿಯ 8299 ಕೆರೆಗಳ ಸಮಗ್ರ ಪುನಶ್ಚೇತನಕ್ಕೆ ರೂ 4 ಸಾವಿರ ಕೋಟಿ ವೆಚ್ಚದ ಯೋಜನೆ ಜಾರಿಗೆ ತರಬೇಕು~ ಎಂದು ಪರಿಸರವಾದಿ ಚೌಡಪ್ಪ  ಆಗ್ರಹಿಸಿದರು.ತಾಲ್ಲೂಕು ರೈತ ಸಂಘದ ಮುಖಂಡರಾದ ಲಕ್ಷ್ಮಿನಾರಾಯಣ, ಲೋಕೇಶಗೌಡ, ಜಯಕರ್ನಾಟಕ  ಸಂಘಟನೆ ಅಧ್ಯಕ್ಷ ಶ್ರೀನಿವಾಸ್, ವಕೀಲ ಸಣ್ಣಕ್ಕಿ ವೆಂಕಟರವಣಪ್ಪ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಅಶ್ವತ್ಥ್, ಬಷೀರ್, ಪುರಸಭೆ ಸದಸ್ಯೆ ಪದ್ಮಾವತಮ್ಮ ಹಾಜರಿದ್ದರು. ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಉಪ ತಹಶೀಲ್ದಾರ್ ಚನ್ನಬಸಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.

 

ಪ್ರತಿಕ್ರಿಯಿಸಿ (+)