ಸೋಮವಾರ, ಜನವರಿ 27, 2020
15 °C

ಶಿಕ್ಷಕರ ನೇಮಕಾತಿ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಇಂದು ಡಿ.ಇಡಿ. ಮತ್ತು ಬಿ.ಇಡಿ. ತರಬೇತಿ ಪಡೆದ ಲಕ್ಷಾಂತರ ಯುವಕ - ಯುವತಿಯರಿದ್ದಾರೆ. ಕಳೆದ 2-3 ವರ್ಷಗಳಿಂದ ಸರ್ಕಾರದ ನೇಮಕಾತಿ ಅಧಿಸೂಚನೆ ಪ್ರಕಟಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಸರ್ಕಾರ ಮತ್ತು ಶಿಕ್ಷಣ ಸಚಿವರು ಶಿಕ್ಷಕರ ನೇಮಕಾತಿ ಬಗ್ಗೆ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ.ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯ ಕ್ರಮವನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಈ ಭರದಲ್ಲಿ ಶಿಕ್ಷಕರ ನೇಮಕಾತಿ ಮರೀಚಿಕೆಯಾಗಬಾರದು ಎಂದು ಉದ್ಯೋಗಾಪೇಕ್ಷಿ ಶಿಕ್ಷಣಾರ್ಥಿಗಳ ಪರವಾಗಿ ಕಳಕಳಿಯಿಂದ ವಿನಂತಿಸುತ್ತೇನೆ.

 

ಪ್ರತಿಕ್ರಿಯಿಸಿ (+)