ಕಾರ್ಕಳ: ಶಿಕ್ಷಕ-ಪೋಷಕರಲ್ಲಿ ಅನ್ಯೋನ್ಯತೆ ಬೆಳೆದಾಗ ವಿದ್ಯಾಸಂಸ್ಥೆಯ ಪ್ರಗತಿ ಸಾಧ್ಯ ಎಂದು ಉದ್ಯಮಿ ನಂದಳಿಕೆ ಸುಹಾಸ ಹೆಗ್ಡೆ ಇಲ್ಲಿ ತಿಳಿಸಿದರು.

ತಾಲ್ಲೂಕಿನ ಬೆಳ್ಮಣ್ನಲ್ಲಿ ಸೇಂಟ್ ಜೋಸೆಫ್ ಚರ್ಚ್ನ ಆಶ್ರಯದಲ್ಲಿ ನೂತನ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಯಾವುದೇ ಶಿಕ್ಷಣ ಸಂಸ್ಥೆಗೆ ಶಿಕ್ಷಕ-ಪೋಷಕ- ವಿದ್ಯಾರ್ಥಿ ಹಾಗೂ ಶಾಲಾ ಆಡಳಿತ ಮಂಡಳಿ ಎಂಬ ನಾಲ್ಕು ಸ್ಥಂಭಗಳು ಅಗತ್ಯ. ಇವು ಸುಭದ್ರವಾಗಿದ್ದಷ್ಟೂ ಶಾಲೆ ಸುಲಲಿತವಾಗಿ ಮುಂದುವರಿಯಲಿದೆ ಎಂದರು.

ಉಡುಪಿ ಜಿಲ್ಲಾ ಕ್ರೈಸ್ತ ಧರ್ಮ ಕೇಂದ್ರಗಳ ಮುಖ್ಯಸ್ಥ ರೆವರೆಂಡ್ ಫಾದರ್ ಡಾ.ಬ್ಯಾಪ್ಟಿಸ್ಟ್ ಮಿನೇಜಸ್ ಸಂಸ್ಥೆಯನ್ನು ಉದ್ಘಾಟಿಸಿದರು. ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಫಾ.ಲಾರೆನ್ಸ್ ಬಿ ಡಿಸೋಜ ಮಾತನಾಡಿ 2012-13 ನೇ ಶೈಕ್ಷಣಿಕ ವರ್ಷದಲ್ಲಿ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿ ಆರಂಭವಾಗಲಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪೂರ್ಣಿಮಾ ಶೆಣೈ ಮಾತನಾಡಿ ಸರ್ಕಾರ 2012-13ನೇ ಸಾಲಿನಲ್ಲಿ ಆಸಕ್ತ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿದ್ದು, ಉತ್ತಮ ಶೈಕ್ಷಣಿಕ ಹಿನ್ನಲೆ ಇರುವ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯ ಆಡಳಿತದಲ್ಲಿ ನೂತನ ಶಾಲೆ ಪ್ರಾರಂಭಗೊಳ್ಳುತ್ತಿರುವುದು ಶುಭದಾಯಕ ಹಾಗೂ ತಾಲೂಕಿನಲ್ಲಿ ಈ ಶೈಕ್ಷಣಿಕ ವರ್ಷದ ಪ್ರಥಮ ಶಾಲೆ ಇದು ಎಂದರು.
ಚರ್ಚ್ನ ಪಾಲನಾ ಮಂಡಳಿ ಉಪಾಧ್ಯಕ್ಷ ಗ್ರೆಗೊರಿ ಮಿನೇಜಸ್, ಕಾರ್ಯದರ್ಶಿ ಲಿಡಿಯಾ ಅರಾನ್ನಾ, ಸಂಸ್ಕೃತ ವಿದ್ವಾನ್ ಡಾ.ಸದಾನಂದ, ರೆವರೆಂಡ್ ಫಾದರ್ ಸಿರಿಲ್ ಅಗೇರಾ, ಸಹಾಯಕ ಧರ್ಮಗುರು ಫಾ.ರೊನಾಲ್ಡ್ ಪಿಂಟೊ, ಫ್ರೌಢಶಾಲಾ ಮುಖ್ಯ ಶಿಕ್ಷಕಿ ರೆನಿಲ್ಡಾ ಪಿರೇರಾ, ಹಿರಿಯ ಪ್ರಾಥುಕ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಮೊನಿಕಾ, ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಜೆನೆಟ್ ಡಿಸೋಜ, ಸಹ ಶಿಕ್ಷಕಿ ಗಾಯತ್ರಿ ಭಟ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.