ಬುಧವಾರ, ಜನವರಿ 29, 2020
29 °C

ಶಿಕ್ಷಣದಿಂದಲೇ ಮಹಿಳಾ ಸಬಲೀಕರಣ: ಕಾರಿನ್‌ ಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಪ್ರಭಾವಶಾಲಿ ಸಾಧನ. ಜ್ಞಾನದ ಪರಿಧಿಯ ವಿಸ್ತರಣೆಯಾಗದ ಹೊರತು ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ’ ಎಂದು ಬೆಂಗಳೂರಿನ ಮಾನವ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಕಾರಿನ್‌ ಕುಮಾರ್‌ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗ, ಮಹಿಳಾ ಅಧ್ಯಯನ ಕೇಂದ್ರವು ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸಹಯೋಗದೊಂದಿಗೆ       ‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಪಠ್ಯಕ್ರಮ ಅಳವಡಿಕೆ’ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾ ಡಿದರು.‘ಮಹಿಳೆಯನ್ನು ಕೇವಲ ಲಿಂಗಾ ತ್ಮಕವಾಗಿ ನೋಡಬೇಕಾಗಿಲ್ಲ. ಎಷ್ಟೋ ಸಾಮಾಜಿಕ ದೃಷ್ಟಿಕೋನಗಳು ಮುರಿದು ಬೀಳುತ್ತಿರುವ ಈ ಸಂದರ್ಭಗಳಲ್ಲಿ ಮಹಿ ಳೆಯರ ಕುರಿತಾಗಿ ನೂತನ ಚಿಂತನ ಧಾರೆಯ ಅವಶ್ಯಕತೆಯಿದೆ’ ಎಂದರು. ‘ಹಿಂಸೆಗೆ ಒಳಗಾದ ಅಸಹಾಯಕ ಹೆಣ್ಣುಮಕ್ಕಳಿಗೆ ಕೇವಲ ಆರ್ಥಿಕ ಸಹಾಯ ನೀಡಿದರೆ ಸಾಲದು. ಅವರ ಸಂಪೂರ್ಣ ಬೆಳವಣಿಗೆಗೆ ಸಹಾಯ ನೀಡುವುದು ಅವಶ್ಯಕ. ಮಹಿಳಾ ದೌರ್ಜ ನ್ಯಕ್ಕೆ ಕೊನೆ ಹಾಡುವ ಪ್ರಾಮಾಣಿಕ ಪ್ರಯತ್ನಗಳು ಎಲ್ಲ ನೆಲೆಗಳಲ್ಲಿಯೂ ನಡೆಯಬೇಕು’ ಎಂದು ಅವರು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಮೀನಾ ಚಂದಾವರಕರ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆ ಗಟ್ಟುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪಠ್ಯಕ್ರಮಗಳಲ್ಲಿಯೇ ಮಹಿಳಾ ದೌರ್ಜನ್ಯದ ವಿರುದ್ಧದ ತಿಳಿವಳಿಕೆ ಮತ್ತು ಜಾಗೃತಿ ಮೂಡಿಸುವ ಕೆಲಸಕ್ಕೆ ಮಹಿಳಾ ವಿಶ್ವವಿದ್ಯಾಲಯ ಮುಂದಾಗಿದೆ ಎಂದರು.ಈ ವಿಚಾರ ಸಂಕಿರಣದಲ್ಲಿ ಹೊರ ಹೊಮ್ಮುವ ಚಿಂತನ-ಮಂಥನಗಳ ಆಧಾರದಲ್ಲಿ ಮುಂಬರುವ ಫೆಬ್ರುವರಿ ತಿಂಗಳಿನಲ್ಲಿ ದುಂಡು ಮೇಜಿನ ಸಭೆ ನಡೆಸಲಾಗುವುದು. ಈ ಎರಡೂ ಕಡೆ ಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯ ಮತ್ತು ಸಲಹೆಗಳನ್ನು ಅಧರಿಸಿ ಮಹಿಳಾ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕೈಕೊಳ್ಳಬೇಕಾದ ಕ್ರಮಗಳು ಮತ್ತು ಪಠ್ಯಕ್ರಮದ ಸುಧಾರಣೆ ಕುರಿತಂತೆ ಖಚಿತವಾದ  ಶಿಫಾರಸುಗಳನ್ನು ಸಿದ್ಧ ಪಡಿಸಿ ಕೇಂದ್ರ ಮತ್ತು ರಾಜ್ಯ     ಸರ್ಕಾರ,  ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಬಿ. ದಿಲ್‌ಷಾದ್‌ ಸ್ವಾಗತಿಸಿದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ  ಡಾ.ಆರ್. ಸುನಂದಮ್ಮ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಜಿ. ತಡಸದ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲಕ್ಷ್ಮಿ ಆಲ್ಕೋಡ್ ವಂದಿಸಿದರು. ಮೊದಲ ಗೋಷ್ಠಿಯಲ್ಲಿ ಪ್ರೊ. ವಿಜಯಾ ಕೋರಿಶೆಟ್ಟಿ, ಡಾ.ಶಶಿ ಗುರು ಪುರ, ಮೈತ್ರೇಯಿ ಕೃಷ್ಣನ್‌, ಎರಡನೇ ಗೋಷ್ಠಿಯಲ್ಲಿ  ಡಾ.ಓಂಕಾರ ಕಾಕಡೆ,  ಪ್ರಜಾವಾಣಿ ಸಹ ಸಂಪಾದಕಿ ಸಿ.ಜಿ. ಮಂಜುಳಾ, ಡಾ.ಮುಖರ್ಜಿ ವಿಚಾರ ಮಂಡಿಸಿದರು.

ಪ್ರತಿಕ್ರಿಯಿಸಿ (+)