ಮಂಗಳವಾರ, ಜೂನ್ 15, 2021
21 °C

ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನ ವಿದ್ಯಾರ್ಥಿ­ಗಳು ಏಕಲವ್ಯ ಶಾಲೆಯ ಪ್ರಯೋಜನ ಪಡೆದು ಶೈಕ್ಷಣಿಕವಾಗಿ ಮುಂದೆ ಬರ­ಬೇಕು ಎಂದು ಕೇಂದ್ರ ಸಚಿವ ಕೆ.ಎಚ್‌.­ಮುನಿಯಪ್ಪ ಹೇಳಿದರು.ತಾಲ್ಲೂಕಿನ ಪುಲಗೂರುಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನ್ನಗಾರಿಹಳ್ಳಿ ಗ್ರಾಮದ ಸಮೀಪ ಭಾನುವಾರ ₨ 14 ಕೋಟಿ ವೆಚ್ಚ­ದಲ್ಲಿ ಕೇಂದ್ರ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ಏಕಲವ್ಯ ವಸತಿ ಶಿಕ್ಷಣ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶೀಘ್ರವಾಗಿ ಟೆಂಡರ್‌ ಕರೆದು ಮೂರು ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸ­ಲಾಗುವುದು ಎಂದು ಹೇಳಿದರು.ಅರ್ಹ ರೈತರಿಗೆ ₨ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಕೃಷಿಕರು, ಕೃಷಿ ಕಾರ್ಮಿಕರ ಹಿತದೃಷ್ಟಿ­ಯಿಂದ ಕೇಂದ್ರ, ರಾಜ್ಯ ಸರ್ಕಾರ­ ಹಲ ಯೋಜನೆ­ಗಳನ್ನು ಜಾರಿಗೆ ತಂದಿವೆ ಎಂದರು.ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿ, ಗಡಿ ಭಾಗದ ಜನರ ಪಾಲಿಗೆ ಏಕಲವ್ಯ ವಸತಿ ಶಿಕ್ಷಣ ಶಾಲೆ ವರದಾನವಾಗಿದೆ. ಹಿಂದುಳಿದ ಪಂಗಡ, ಇತರ ವರ್ಗದ ವಿದ್ಯಾರ್ಥಿಗಳು ಇಲ್ಲಿ ದೊರೆಯುವ ಉತ್ತಮ ಶಿಕ್ಷಣದ ಅನುಕೂಲ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗ­ಬೇಕು ಎಂದು ಹೇಳಿದರು.ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ವಿಶೇಷ ಕಾಳಜಿ ವಹಿಸಿದ ಪರಿಣಾಮ ಶ್ರೀನಿವಾಸಪುರ ತಾಲ್ಲೂ­ಕಿಗೆ ರೈಲು ಬೋಗಿ ಕಾರ್ಖಾನೆ ಮಂಜೂರಾಗಿದೆ. ಇದರಿಂದ ಇಲ್ಲಿನ ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಮಾ.5ರಂದು ಮುಖ್ಯ ಮಂತ್ರಿ ಸಿದ್ದ­ರಾಮಯ್ಯ ರೈಲ್ವೆ ಕೋಚ್‌ ಫ್ಯಾಕ್ಟರಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಹೇಳಿದರು.ಮುಖಂಡರಾದ ಗೋವಿಂದಸ್ವಾಮಿ, ವಾಣಿ ಕೃಷ್ಣಾರೆಡ್ಡಿ, ಎಲ್‌.­ಗೋಪಾಲ­ಕೃಷ್ಣ, ವಿ.ವೆಂಕಟಮುನಿಯಪ್ಪ, ಅನಿಲ್‌ ಕುಮಾರ್‌, ಶೇಷಾಪುರ ಗೋಪಾಲ್, ಅಕ್ಬರ್‌ ಷರೀಫ್‌, ಮಾರುತಿ ರೆಡ್ಡಿ, ಬಿ.ಎಲ್‌.ರಾಮಣ್ಣ, ಜಿ.ರಾಜಣ್ಣ, ವೆಂಕ­ಟಾದ್ರಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಮಳೆ: ಸಮಾರಂಭ ಪ್ರಾರಂಭ­ವಾಗುತ್ತಿದ್ದಂತೆ ಮಳೆ ಸುರಿಯಲು ಪ್ರಾರಂಭಿ­ಸಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕುರ್ಚಿ ಹಾಗೂ ಟವಲ್‌ಗಳನ್ನು ತಲೆ ಮೇಲೆ ಇಟ್ಟುಕೊಂಡು ಮಳೆಯಿಂದ ರಕ್ಷಣೆ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.