ಮಂಗಳವಾರ, ಮೇ 18, 2021
22 °C

ಶೀಘ್ರವೇ ರಾಷ್ಟ್ರೀಯ ಜಲನೀತಿ: ಬನ್ಸಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್/ಪಿಟಿಐ): ಇದೇ ತಿಂಗಳ ಅಂತ್ಯದೊಳಗೆ `ರಾಷ್ಟ್ರೀಯ ಜಲ ನೀತಿ~ ಸಿದ್ಧವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಾಲ್ ಭರವಸೆ ನೀಡಿದರು.ಮಂಗಳವಾರದಿಂದ ಇಲ್ಲಿ ಆರಂಭವಾಗುವ `ಇಂಡಿಯಾ ವಾಟರ್ ವೀಕ್~ ಕಾರ್ಯಕ್ರಮ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ `ರಾಷ್ಟ್ರೀಯ ಜಲನೀತಿ~ಕರಡು ಸಿದ್ಧವಾಗಿದೆ. ಸಂಬಂಧಿಸಿದ ಇಲಾಖೆಗಳೊಂದಿಗೆ ಸಂವಾದ ಆಯೋಜಿಸುತ್ತಿದ್ದೇವೆ. ತಿಂಗಳ ಅಂತ್ಯದೊಳಗೆ ಅಂತಿಮರೂಪ ಪಡೆಯಲಿದೆ ಎಂದರು.`ವಾಟರ್ ವೀಕ್~ ಉದ್ಘಾಟನೆ:

`ಇಂಡಿಯಾ ವಾಟರ್ ವೀಕ್~ ಕಾರ್ಯಕ್ರಮವನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಲಿದ್ದಾರೆ. ನೀರಿಗೆ ಸಂಬಂಧಿಸಿದ ವಿಚಾರಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ.ಮೊದಲ ದಿನ ನೀರು, ಇಂಧನ ಮತ್ತು ಆಹಾರ ಸುರಕ್ಷತೆ ಕುರಿತು ಚರ್ಚೆ ನಡೆಯುತ್ತದೆ. ಇದೇ ಸಂದರ್ಭದಲ್ಲಿ `ವಾರಿಸ್~ (WARISWater Resources Info-m-ation System)  ವೆಬ್ ಆಧಾರಿತ ಮಾಹಿತಿ ಪ್ರದರ್ಶನವಿದೆ.ಕಾರ್ಯಕ್ರಮದಲ್ಲಿ ವಿಶ್ವ ಮಟ್ಟದ ಜಲನೀತಿ ರೂಪಕರು, ಕೈಗಾರಿಕೋದ್ಯಮಿಗಳು, ತಂತ್ರಜ್ಞರು, ವೃತ್ತಿಪರರನ್ನು ಒಂದೇ ಸೂರಿನಡಿ ಸೇರಿಸಿ, ಜಾಗತಿಕ ಮಟ್ಟದಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಬನ್ಸಾಲ್ ವಿವರಿಸಿದರು.ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಇವುಗಳ ಜೊತೆಗೆ ಆಫ್ಘಾನಿಸ್ತಾನ, ನೇಪಾಳ ಸೇರಿದಂತೆ 43 ರಾಷ್ಟ್ರದ ಜಲಸಂಪನ್ಮೂಲ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.