ಮಂಗಳವಾರ, ಫೆಬ್ರವರಿ 25, 2020
19 °C
ಮುಂಬೈನ ಉದ್ಯಮಿ ಇಂದ್ರಾಣಿ, ಮಾಜಿ ಪತಿ ಖನ್ನಾ ಬಂಧನ

ಶೀನಾ ಕೊಲೆ ಪ್ರಕರಣಕ್ಕೆ ಹೊಸ ತಿರುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸ್ಟಾರ್‌ ಟಿವಿ’ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್‌ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿ ಅವರನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದು, ಈ ಪ್ರಕರಣ ಕ್ಷಣಕ್ಕೊಂದು ಹೊಸ ತಿರುವು ಪಡೆಯುತ್ತಿದೆ.

ಶೀನಾ ಬೋರಾ ತನ್ನ ಸಹೋದರಿ ಎಂದು ಇಂದ್ರಾಣಿ ಮುಖರ್ಜಿ  ಹೇಳಿಕೊಂಡಿದ್ದರು.  ಆದರೆ, ಶೀನಾ ಆಕೆಯ ಮೊದಲ ಪತಿ ಸಿದ್ದಾರ್ಥ ದಾಸ್‌ ಎನ್ನುವವರ ಮಗಳು ಎಂಬ ಸತ್ಯ ಹೊರಬಿದ್ದಿದೆ.

2012ರಿಂದ ಶೀನಾ ನಾಪತ್ತೆಯಾಗಿದ್ದಳು. ಇಂದ್ರಾಣಿ ಆಕೆ ಅಮೆರಿಕದಲ್ಲಿ ಓದುತ್ತಿದ್ದಾಳೆ ಎಂದೇ ಎಲ್ಲರಿಗೂ ಹೇಳಿದ್ದರು. ಖಚಿತ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ಇಂದ್ರಾಣಿ ಅವರ ಕಾರು ಚಾಲಕನನ್ನು ತನಿಖೆಗೆ ಒಳಪಡಿಸಿದಾಗ ಶೀನಾ ಕೊಲೆಯಾಗಿರುವ ವಿಚಾರ ಹೊರಬಿದ್ದಿದೆ.

ಶೀನಾಳನ್ನು ರಾಯಗಡ ಬಳಿ ಇಂದ್ರಾಣಿಯೇ ಕೊಲೆ ಮಾಡಿದ್ದು, ಆ ಸಂದರ್ಭದಲ್ಲಿ ತಾನು ಅಲ್ಲಿಯೇ ಇದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ನಡುವೆ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆಯ ಆಧಾರದಲ್ಲಿ ಇಂದ್ರಾಣಿ ಅವರ 2ನೇ ಪತಿಯಾಗಿದ್ದ ಸಂಜೀವ್‌ ಖನ್ನಾ ಅವರನ್ನು ಕೋಲ್ಕತ್ತದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)