ಮಂಗಳವಾರ, ಜನವರಿ 28, 2020
23 °C

ಶುಕ್ರವಾರ, 20–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೌಪೀನಧಾರಿ ಮಾಜಿ ಪ್ರಧಾನಿ

ಕೊಲಂಬೊ, ಡಿ. 19 – ಪಾರ್ಲಿಮೆಂಟ್‌ ಸದಸ್ಯರಿಗಾಗಿ ಮೀಸಲಾದ ‘ಕ್ರಾವಸ್ತಿ’ ಹಾಸ್ಟೆಲ್‌ನಲ್ಲಿ ನಿನ್ನೆ ರಾತ್ರಿ ಮಾಜಿ ಪ್ರಧಾನ ಮಂತ್ರಿಯೊಬ್ಬರು ಕರವಸ್ತ್ರದಷ್ಟು ಅಗಲದ ಬಟ್ಟೆಯನ್ನು ಮಾತ್ರ ಧರಿಸಿಕೊಂಡು ಕಾಣಿಸಿಕೊಂಡರು.‘ಸಿಂಹಳದಲ್ಲಿ ಅಗ್ಗದ ಹತ್ತಿಬಟ್ಟೆ ಅಭಾವವಿರುವುದರತ್ತ ಸರ್ಕಾರದ ಗಮನ ಸೆಳೆಯಲು ಇದೊಂದೇ ಹಾದಿ’ ಎಂದು  ಈ ‘ಕೌಪೀನಧಾರಿ’ ಶ್ರೀ ವಿಜಯಾನಂದ ದಹನಾಯಕೆ ವಿವರಿಸಿದರು.ಸಚಿವೆ ಗೈರು ಹಾಜರಿ ಪ್ರಸ್ತಾಪ

ಬೆಂಗಳೂರು, ಡಿ. 19 – ಸಮಾಜ ಕಲ್ಯಾಣ ಸಚಿವೆ ಶ್ರೀಮತಿ ಯಶೋಧರ ದಾಸಪ್ಪ ಅವರು ಕಳೆದ ಕೆಲವು ದಿನಗ­ಳಿಂದ ಸಭೆಗೆ ಹಾಜರಾಗುತ್ತಿಲ್ಲದಿರು­ವು­ದನ್ನು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು.

ಪ್ರತಿಕ್ರಿಯಿಸಿ (+)