ಶುಕ್ರವಾರ, ಮೇ 20, 2022
21 °C

ಶುದ್ಧ ನೀರಿಗೆ ಸರ್ಕಾರ ಬದ್ಧ: ಜಯಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಜಿಲ್ಲೆಯ ಶಿರಾ, ಪಾವಗಡ, ಮಧುಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ಲೋರೈಡ್‌ಯುಕ್ತ ನೀರಿದ್ದು, ಜನರಿಗೆ ಶುದ್ಧ ಕುಡಿಯುವ ನೀರು ಕೊಡುವ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರ ಯೋಜನೆ ರೂಪಿಸಲಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮಸೌಧ, ನೂತನ ಶಾಲಾ ಕೊಠಡಿ, ಓವರ್ ಹೆಡ್ ಟ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು, ಗುಲ್ಬರ್ಗಾ-ರಾಯಚೂರು ಪ್ರದೇಶದ ಕುಡಿಯುವ ನೀರಿನಲ್ಲಿ ವಿಷಪೂರಿತ ಆರ್ಸನಿಕ್ ಅಂಶ ಪತ್ತೆಯಾಗಿದ್ದು, ಕುಡಿಯಲು ಸಾಧ್ಯವಿಲ್ಲದ 65 ಬೋರ್‌ವೆಲ್ ಮುಚ್ಚಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಸೂಚಿಸಿದೆ ಎಂದು ಹೇಳಿದರು.ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮಗಳ ಆಭಿವೃದ್ಧಿಗೆ ಜನಪ್ರತಿನಿಧಿಗಳ ಬದ್ದತೆ ಅಗತ್ಯ. ತನ್ನ ಮನೆ ರೀತಿ ಗ್ರಾಮವನ್ನು ಪರಿಭಾವಿಸಿದರೆ ಸಮಸ್ಯೆಗಳು ತನ್ನ ಸಮಸ್ಯೆ ರೀತಿಯಲ್ಲೇ ಗೋಚರಿಸುತ್ತವೆ. ಆಗ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತದೆ ಎಂದರು.ಗ್ರಾಮ ಪಂಚಾಯತಿ ಅಧ್ಯಕ್ಷ ಹೊಸಮನೆ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಜಿ.ಪಂ. ಮಾಜಿ ಸದಸ್ಯ ಪಿ.ಆರ್.ಮಂಜುನಾಥ್, ಎಸ್.ಎನ್.ಕೃಷ್ಣಯ್ಯ, ಪರ್ವತಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾ, ತಹಶೀಲ್ದಾರ್ ಕುಲಕರ್ಣಿ, ಬಿಇಒ ರಾಜಕುಮಾರ್, ಇಒ ವೇದಮೂರ್ತಿ, ಹೆಂದೊರೆ ಗ್ರಾಮ ಪಂಚಾಯತಿ ಅಧ್ಯಕ್ಷ ಪದ್ಮರಾಜ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಮೂಲೆಮನೆ ರಂಗನಾಥ್, ಗಂಗಾಧರ, ಇ.ಶಿವಾನಂದ್, ಲಕ್ಷ್ಮಣ್, ಕೆ.ಎಂ.ಶ್ರೀನಿವಾಸ್,  ಆರ್.ಟಿ.ನಾರಾಯಣಪ್ಪ, ಪಿಡಿಒ ತಿಪ್ಪೇಸ್ವಾಮಿ, ದೊಡ್ಡರಂಗಯ್ಯ, ನಾಗಲಿಂಗಪ್ಪ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.