ರಿಯೊ ಡಿ ಜನೈರೊ (ಪಿಟಿಐ): ಒಲಿಂಪಿಕ್ಸ್ನ ಆರಂಭದ ದಿನ ಗಳಿಂದಲೂ ನಿರಾಸೆ ಕಾಣುತ್ತಿರುವ ಭಾರತದ ಶೂಟರ್ಗಳ ನೀರಸ ಪ್ರದ ರ್ಶನ ಮಂಗಳವಾರವೂ ಮುಂದುವರಿ ಯಿತು. ಮಹಿಳೆಯರ 25 ಮೀಟರ್ಸ್ ಪಿಸ್ತೂಲ್ ವಿಭಾಗದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕಂಡು ಬಂದಿತು.

ಪಂಜಾಬ್ನ ಹೀನಾ ಸಿಧು ಇಂಚೆನ್ ಏಷ್ಯನ್ ಕ್ರೀಡಾಕೂಟದ 25 ಮೀಟರ್ಸ್ ಫೈರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಕಂಚು ಜಯಿಸಿದ್ದರು. ಹೋದ ವರ್ಷ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನ, ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಬೆಳ್ಳಿ ಜಯಿಸಿ ಭರವಸೆ ಮೂಡಿಸಿದ್ದ ಕಾರಣ ಅವರು ಇಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.

ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ ಹೀನಾ ಸಿಧು ಒಟ್ಟು 286 ಪಾಯಿಂಟ್ಗಳನ್ನು ಕಲೆ ಹಾಕಿದರು. ಈ ಸ್ಪರ್ಧೆಯಲ್ಲಿ 40 ಮಹಿಳಾ ಶೂಟರ್ಗಳು ಪಾಲ್ಗೊಂಡಿದ್ದರು. ಅದರಲ್ಲಿ ಹೀನಾಗೆ 30ನೇ ಸ್ಥಾನ ಲಭಿಸಿತು. ಒಬ್ಬ ಶೂಟರ್ಗೆ ಗರಿಷ್ಠ 300 ಪಾಯಿಂಟ್ಸ್ ಗಳಿಸಲು ಅವಕಾಶವಿತ್ತು.ಹೀನಾ ಮೊದಲ ಎರಡು ಅವಕಾಶಗಳಲ್ಲಿ ತಲಾ 95 ಪಾಯಿಂಟ್ಸ್ ಕಲೆ ಹಾಕಿದರು.

ಕೊನೆಯ ಅವಕಾಶದಲ್ಲಿ 96 ಪಾಯಿಂಟ್ಸ್ ಗಳಿಸಿ ತಮ್ಮ ಹೋರಾಟವನ್ನು ಮುಗಿಸಿದರು. ಹೀನಾ ಲಂಡನ್ ಒಲಿಂಪಿಕ್ಸ್ನಲ್ಲಿ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧಿಸಿ ಅರ್ಹತಾ ಸುತ್ತಿನಲ್ಲಿ 12ನೇ ಸ್ಥಾನ ಪಡೆದಿದ್ದರು.ಹೀನಾ ಮೂರು ದಿನಗಳ ಹಿಂದೆ ಇಲ್ಲಿಯೇ 10 ಮೀಟರ್ಸ್ ಏರ್ ರೈಫಲ್ ವಿಭಾಗ ಅರ್ಹತಾ ಸುತ್ತಿನಲ್ಲಿಯೇ ನಿರಾಸೆ ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.