ಮುಂಬೈ (ಪಿಟಿಐ): `ಯಾವುದೇ ಕಾರಣಕ್ಕೂ ಶೈಕ್ಷಣಿಕ ಸಾಲದ ಅರ್ಜಿ ತಿರಸ್ಕರಿಸಬಾರದು~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕುಗಳಿಗೆ ಕಡ್ಡಾಯ ಸೂಚನೆ ನೀಡಿದೆ.

ಒಂದು ವೇಳೆ ಅರ್ಜಿದಾರರು ಬ್ಯಾಂಕಿನ ಸೇವಾ ವ್ಯಾಪ್ತಿಗೆ ಬರದಿದ್ದರೂ ಅಂತಹ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆಯಾ ಬ್ಯಾಂಕುಗಳು ತಮ್ಮ ಎಲ್ಲ ಶಾಖಾ ವ್ಯವಸ್ಥಾಪಕರಿಗೆ ಸೂಚನೆ ನೀಡುವಂತೆ ಹೇಳಿದೆ.

`ಹಲವು ಬ್ಯಾಂಕುಗಳು ಅರ್ಜಿದಾರರು ತಮ್ಮ ಸೇವಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಶೈಕ್ಷಣಿಕ ಸಾಲ ನಿರಾಕರಿಸಿದ ಪ್ರಕರಣಗಳು `ಆರ್ಬಿಐ~ ಮುಂದೆ ಬಂದಿದ್ದವು. ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ `ಆರ್ಬಿಐ~ ಸರ್ಕಾರಿ ಪ್ರಾಯೋಜಿತ ಶೈಕ್ಷಣಿಕ ಸಾಲ ಯೋಜನೆ ಹೊರತು ಪಡಿಸಿ, ಇತರೆ ಯಾವುದೇ ರೀತಿಯ ಶೈಕ್ಷಣಿಕ ಸಾಲದ ಅರ್ಜಿಗಳು ಬ್ಯಾಂಕಿನ ಮುಂದೆ ಬಂದರೆ, ಸೇವಾ ವ್ಯಾಪ್ತಿಯ ಕಾರಣ ನೀಡಿ ಅದನ್ನು ತಿರಸ್ಕರಿಸುವಂತಿಲ್ಲ~ ಎಂದು ಹೇಳಿದೆ.

ಕಳೆದ ಹಣಕಾಸು ವರ್ಷದಲ್ಲಿ ಶೈಕ್ಷಣಿಕ ಸಾಲದ ಬೇಡಿಕೆ 502 ಶತಕೋಟಿಗಳಷ್ಟಿತ್ತು ಎಂದು `ಆರ್ಬಿಐ~ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.