ಬುಧವಾರ, ಜೂನ್ 23, 2021
22 °C

ಶೈನಿ ಸ್ವಾಗತಕ್ಕೆ ಬಾಲಿವುಡ್‌ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ನಟ ಶೈನಿ ಅಹುಜಾ ಅವರು ಬಾಲಿವುಡ್‌ನಲ್ಲಿ ಮತ್ತೆ ನೆಲೆ ಕಂಡುಕೊಳ್ಳುವ ತವಕದಲ್ಲಿದ್ದಾರೆ. ಇವರ ಈ ಆಸೆಗೆ ನೀರೆರೆದು ಪೋಷಿಸುತ್ತಿರುವವರು ಚಿತ್ರ ತಯಾರಕ ಅನೀಸ್‌ ಬಾಜ್ಮಿ.ಮನೆಗೆಲಸದಾಕೆಯ ಆರೋಪದ ಮೇಲೆ 2009ರಲ್ಲಿ ಬಂದಿಯಾಗಿದ್ದ ಅವರು ಸುಮಾರು ಐದು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದರು. ‘ವೆಲ್‌ಕಮ್‌’ ಚಿತ್ರದ ಮುಂದುವರಿದ ಭಾಗವಾಗಿರುವ ‘ವೆಲ್‌ಕಮ್‌ ಬ್ಯಾಕ್‌’ ಎಂಬ ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಶೈನಿ ಅಹುಜಾ ಈಗ ತಮ್ಮ ಪಾತ್ರದ ತಾಲೀಮಿನಲ್ಲಿ ತೊಡಗಿದ್ದಾರೆ.ಈಗಾಗಲೇ ‘ವೆಲ್‌ಕಮ್‌ ಬ್ಯಾಕ್‌’ ಚಿತ್ರದ ಅರ್ಧ ಭಾಗದ ಚಿತ್ರೀಕರಣ ದುಬೈನಲ್ಲಿ ಪೂರ್ಣಗೊಂಡಿದೆ. ನಾಸಿರುದ್ದೀನ್‌ ಶಾ, ಡಿಂಪಲ್‌ ಕಪಾಡಿಯಾ, ಜಾನ್‌ ಅಬ್ರಹಾಂ, ಶ್ರುತಿ ಹಾಸನ್‌, ಅನಿಲ್‌ ಕಪೂರ್‌, ನಾನಾ ಪಾಟೇಕರ್‌ ಹಾಗೂ ಪರೇಶ್‌ ರಾವಲ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ.ಶೈನಿ ಅವರಿಗೆ  ಸಿಕ್ಕಿರುವ ಅವಕಾಶದ ಕುರಿತು ಅವರ ಕುಟುಂಬ ವರ್ಗ ಬಹಳ ಖುಷಿಪಟ್ಟಿದೆಯಂತೆ. ‘ಘೋಸ್ಟ್’ ಚಿತ್ರದ ನಂತರ ಬಹಳ ವರ್ಷ ಚಿತ್ರರಂಗದಿಂದ ದೂರವೇ ಉಳಿದಿದ್ದ ಶೈನಿ ಅವರಿಗೆ ಈ ಚಿತ್ರ ಹೊಸ ಭರವಸೆಯನ್ನು ನೀಡಿದೆಯಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.