ಶೋಯಬ್ ಬೆಂಬಲಕ್ಕೆ ಅಫ್ರಿದಿ

7

ಶೋಯಬ್ ಬೆಂಬಲಕ್ಕೆ ಅಫ್ರಿದಿ

Published:
Updated:

ಕರಾಚಿ (ಪಿಟಿಐ): `ಸಚಿನ್ ತೆಂಡೂಲ್ಕರ್ ಅವರು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯಬ್ ಅಖ್ತರ್ ವೇಗಕ್ಕೆ ಹೆದರುತ್ತಿದ್ದರು ಎಂಬುದಕ್ಕೆ ನಾನೇ ಸಾಕ್ಷಿ~-ಈ ಮಾತು ಹೇಳಿದ್ದು ಪಾಕಿಸ್ತಾನ ಕ್ರಿಕೆಟ್‌ನ ಮತ್ತೊಬ್ಬ ಆಟಗಾರ ಹಾಗೂ ಶೋಯಬ್ ಸಹಪಾಠಿ ಶಾಹೀದ್ ಅಫ್ರಿದಿ.`ಹೌದು, ಅಖ್ತರ್ ವೇಗಕ್ಕೆ ಸಚಿನ್ ಹೆದರುತ್ತಿದ್ದರು. ನಾನೇ ಅದನ್ನು ನೋಡಿದ್ದೇನೆ. ಸ್ಕ್ವೇರ್ ಲೆಗ್‌ನಲ್ಲಿ ನಾನು ಫೀಲ್ಡ್ ಮಾಡುತ್ತಿದ್ದೆ. ಶೋಯಬ್ ಬೌಲ್ ಮಾಡಲು ಬಂದ ತಕ್ಷಣ ತೆಂಡೂಲ್ಕರ್ ಕಾಲುಗಳು ಅದುರುತ್ತಿದ್ದವು~ ಎಂದು ಮಾಜಿ ನಾಯಕ ಅಫ್ರಿದಿ ನುಡಿದಿದ್ದಾರೆ.ಈ ಮೂಲಕ ಅಖ್ತರ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಯಾವ ಪಂದ್ಯದಲ್ಲಿ ಈ ರೀತಿ ಆಗಿತ್ತು ಎಂಬುದನ್ನು ಅಫ್ರಿದಿ ವಿವರಿಸಿಲ್ಲ. ಉಪಖಂಡದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕ್‌ನ ಯುವ ಸ್ಪಿನ್ನರ್ ಸಯೀದ್ ಅಜ್ಮಲ್ ಎಸೆತಗಳನ್ನು ಎದುರಿಸಲು ಕೂಡ ಪರದಾಡಿದ್ದರು ಎಂಬುದನ್ನು ಅವರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry