ಮಂಗಳವಾರ, ಏಪ್ರಿಲ್ 13, 2021
32 °C

ಶೋಷಣೆ ರಹಿತ ಜೀವನವೇ ಸ್ವಾತಂತ್ರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ:  ಶೋಷಣೆ ರಹಿತ ಜೀವನವೇ ಸ್ವಾತಂತ್ರ್ಯದ ತಿರುಳು ಎಂಬುದನ್ನು ಸಾಧಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ತಹಶೀಲ್ದಾರ ಗಣಪತಿ ಕಟ್ಟಿನಕೆರೆ ಹೇಳಿದರು. ಪಟ್ಟಣದ ನೆಹರೂ ಮೈದಾನದಲ್ಲಿ ಬುಧವಾರ ನಡೆದ 66ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ  ಧ್ವಜಾರೋಹಣ ನೆರವೇರಿಸಿದ ನಂತರ ಅವರು ಶುಭ ಸಂದೇಶ ನೀಡಿದರು. `ನಾವು ಭಾರತೀಯರಾಗಿ ಭಾರತೀಯತೆಯನ್ನು ಉಳಿಸಿಕೊಳ್ಳುವುದಕ್ಕೆ ಮಹತ್ವ ನೀಡಬೇಕು.ದೇಶದ ಏಕತೆ, ರಕ್ಷಣೆ, ಸಾಮಾಜಿಕ ನ್ಯಾಯ, ಆಹಾರ ಭದ್ರತೆಗೆ ದುಡಿಯುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯತತ್ಪರರಾಗಬೇಕು~ ಎಂದರು.`ಕ್ಷಿಪಣಿ ಅಭಿವೃದ್ಧಿಯಲ್ಲಿ ಮಹತ್ವದ ಸಾಧನೆಗೈಯುವ ಮೂಲಕ ದೇಶ  ಕ್ಷಿಪಣಿ  ಪ್ರತಿರೋಧಕ ವ್ಯವಸ್ಥೆ ಹೊಂದಿರುವ ನಾಲ್ಕನೇ ರಾಷ್ಟ್ರವಾಗಿರುವುದು ಹೆಮ್ಮೆಯ ಸಂಗತಿ. ಬರದಿಂದ ರಾಜ್ಯ ತತ್ತರಿಸುತ್ತಿರುವ ಸಂದರ್ಭದಲ್ಲಿ  ಸಾಲಮನ್ನಾ ಕ್ರಮ ರೈತರಿಗೆ ಆಶಾಕಿರಣವಾಗಿದೆ~ ಎಂದರು. ಪೊಲೀಸ್, ಗೃಹರಕ್ಷಕ ದಳ, ಸ್ಕೌಟ್ಸ್ ಹಾಗೂ ಗೈಡ್ಸ್‌ಗಳಿಂದ  ಗೌರವ ರಕ್ಷೆ ನೀಡಲಾಯಿತು. ಪ.ಪಂ.ಅಧ್ಯಕ್ಷ ಕೆ.ಜಿ.ನಾಯ್ಕ,ಉಪಾಧ್ಯಕ್ಷೆ ನೇತ್ರಾವತಿ ನಾಯ್ಕ, ತಾ.ಪಂ.ಅಧ್ಯಕ್ಷೆ ಶಾಂತಿ ಹಸ್ಲರ್, ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಜನ ಪ್ರತಿನಿಧಿಗಳು, ಅಧಿಕಾರಿಗಳು  ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಎನ್.ಆರ್. ಹೆಗಡೆಕರ ನಿರೂಪಿಸಿದರು.ನ್ಯಾಯಾಲಯದಲ್ಲಿ: ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ವಿಮಲಾ ಆರ್. ನಂದಗಾಂವ್ ಧ್ವಜಾರೋಹಣ ನೆರವೇರಿಸಿದರು. ವಕೀಲರ ಸಂಘದ ಅಧ್ಯಕ್ಷ ಎ.ಪಿ.ಭಟ್ಟ ಮುತ್ತಿಗೆ ಮತ್ತು ಇತರ ವಕೀಲರು ಉಪಸ್ಥಿತರಿದ್ದರು.ಪ.ಪಂ: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಪ.ಪಂ. ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ನೇತ್ರಾವತಿ ನಾಯ್ಕ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.ನಿವೃತ್ತ ನೌಕರರ ಸಂಘ: ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು  ಶಾಖೆಯ ಆಶ್ರಯದಲ್ಲಿ ಪಟ್ಟಣದ  ಐಶ್ವರ್ಯ ಕಂಪೂಟರ್ಸ್‌ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಪದಾಧಿಕಾರಿಗಳಾದ  ಡಿ.ಸಿ. ನಾಯ್ಕ ಅವರಗುಪ್ಪ, ಜಿ.ಎಂ.ಕುಮಟಾಕರ್,ಪಿ.ವಿ.ಹೆಗಡೆ, ಜಿ.ಐ.ನಾಯ್ಕ, ಎನ್.ಐ.ನಾಯ್ಕ ಕೋಲಸಿರ್ಸಿ, ಎಸ್.ಎಸ್.ರೋಜಾರಿಯೋ ಉಪಸ್ಥಿತರಿದ್ದರು.ನಿವೇದಿತಾ ಮಹಿಳಾ ಮಂಡಳ: ಪಟ್ಟಣದ ನಿವೇದಿತಾ ಮಹಿಳಾ ಮಂಡಳದಲ್ಲಿ  ಅಧ್ಯಕ್ಷೆ ಗಾಯತ್ರಿ ವಿ. ಭಟ್ಟ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಸುರೇಖಾ ಅಂಬೇಕರ್ ಮತ್ತು ಇತರ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.